ಸಂಗ್ರಹ ಚಿತ್ರ 
ದೇಶ

ಆದರ್ಶ ಹಗರಣ: ಮಾಜಿ ಸಿಎಂ ಅಶೋಕ್ ಚೌವ್ಹಾಣ್ ವಿರುದ್ಧ ತನಿಖಾನುಮತಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

ಬಹು ಕೋಟಿ ಆದರ್ಶ ಹೌಸಿಂಗ್‌ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್‌ ಚವಾಣ್‌ ಅವರಿಗೆ ಬಾಂಬೇ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು, 2016ರಲ್ಲಿ ರಾಜ್ಯಪಾಲರು ನೀಡಿದ್ದ ವಿಚಾರಣಾ ಅನುಮತಿಯನ್ನು ತಿರಸ್ಕರಿಸಿದೆ.

ಮುಂಬೈ: ಬಹು ಕೋಟಿ ಆದರ್ಶ ಹೌಸಿಂಗ್‌ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್‌ ಚವಾಣ್‌ ಅವರಿಗೆ ಬಾಂಬೇ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು,  2016ರಲ್ಲಿ ರಾಜ್ಯಪಾಲರು ನೀಡಿದ್ದ ವಿಚಾರಣಾ ಅನುಮತಿಯನ್ನು ತಿರಸ್ಕರಿಸಿದೆ.
ಈ ಹಿಂದೆ ಬಾಂಬೇ ಹೈಕೋರ್ಟ್ ಗೆ ಸಾಕ್ಷಿ ಸಲ್ಲಿಕೆ ಮಾಡುವುದಾಗಿ ಹೇಳಿದ್ದ ಸಿಬಿಐ ಅಧಿಕಾರಿಗಳು ನಿಗದಿತ ಸಮಯದಲ್ಲಿ ಸಾಕ್ಷ್ಯಾಧಾರ ಸಲ್ಲಿಕೆ ಮಾಡುವಲ್ಲಿ ವಿಫಲವಾಗಿರುವುದರಿಂದ ಬಾಂಬೇ ಹೈಕೋರ್ಟ್ ಪ್ರಕರಣದ ಪ್ರಮುಖ  ಆರೋಪಿಯಾಗಿರುವ ಮಾಜಿ ಸಿಎಂ ಅಶೋಕ್ ಚೌವ್ಹಾಣ್ ಅವರ ವಿರುದ್ಧದ ವಿಚಾರಣಾ ಅನುಮತಿಯನ್ನು ತಿರಸ್ಕರಿಸಿದೆ.
ಸಿಬಿಐ ತಾನು ಹೇಳಿದಂತೆ ಯಾವುದೇ ಹೊಸ ಸಾಕ್ಷ್ಯಾಧಾರಗಳನ್ನು ಈ ವರೆಗೂ ಸಲ್ಲಿಸಿಲ್ಲ. ಹೀಗಾಗಿ ಚೌವ್ಹಾಣ್‌ ವಿರುದ್ಧದ ತನಿಖಾ ಅನುಮತಿಯನ್ನು ನಾವು ತಿರಸ್ಕರಿಸುತ್ತಿದ್ದೇವೆ ಎಂದು ನ್ಯಾಯಾಧೀಶರಾದ ರಣಜಿತ್‌ ಮೋರೆ ಮತ್ತು  ಸಾಧನಾ ಜಾಧವ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ. ಅಂತೆಯೇ ರಾಜ್ಯಪಾಲ ವಿದ್ಯಾಸಾಗರ ರಾವ್‌ ಅವರು ಚೌವ್ಹಾಣ್‌ ವಿರುದ್ಧ ತನಿಖಾ ಅನುಮತಿ ನೀಡುವ ಮುನ್ನ ಸಿಬಿಐ ಸಲ್ಲಿಸಿದ್ದ ಸಾಕ್ಷ್ಯಗಳನ್ನು ವಿಶ್ವಾಸಾರ್ಹ  ಸಾಕ್ಷ್ಯಗಳೆಂದು ಪರಿಗಣಿಸಲಾಗದು ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದ್ದು, ತನಿಖಾ ಅನುಮತಿ ನೀಡಿರುವ ಪ್ರಾಧಿಕಾರವು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಯಾರೊಬ್ಬರ ಅಭಿಪ್ರಾಯದಿಂದಲೂ ಪ್ರಭಾವಿತರಾಗಲು  ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.
ಹೈಕೋರ್ಟ್ ನ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥರೂ ಕೂಡ ಆಗಿರುವ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌವ್ಹಾಣ್ ಅವರು‌, "ಸತ್ಯ ಮೇವ ಜಯತೇ, ನನಗೆ ನ್ಯಾಯಾಂಗದಲ್ಲಿ ಸಂಪೂರ್ಣ  ವಿಶ್ವಾಸವಿದೆ. ಆದರೆ ರಾಜ್ಯ ಸರ್ಕಾರದ ಆದೇಶ ರಾಜಕೀಯ ಪ್ರೇರಿತವಾಗಿದೆ'' ಎಂದು ಹೇಳಿದ್ದಾರೆ.
2013ರಲ್ಲಿ ಆಗಿನ ರಾಜ್ಯಪಾಲರಾಗಿದ್ದ ಕೆ ಶಂಕರನಾರಾಯಣ ಅವರು ಅಶೋಕ್‌ ಚೌವ್ಹಾಣ್‌ ವಿರುದ್ದ ವಿಚಾರಣೆ ನಡೆಸಲು ಸಿಬಿಐ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದರು. ಅದರೆ 2016ರಲ್ಲಿ ಅಂದಿನ ರಾಜ್ಯಪಾಲರಾಗಿದ್ದ ಸಿ  ವಿದ್ಯಾಸಾಗರ ರಾವ್‌ ಅವರು ಈ ನಿರ್ಧಾರವನ್ನು ಪುನರ್‌ ಪರಿಶೀಲಿಸಿ ಸಿಬಿಐ ತನಿಖೆಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಅಶೋಕ್ ಚೌವ್ಹಾಣ್ ಅವರು, ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರವಾಗಿ ಸಿಬಿಐ  ಚೌವ್ಹಾಣ್‌ ವಿರುದ್ಧ ಹೊಸ ಸಾಕ್ಷ್ಯಗಳು ತನ್ನ ಬಳಿ ಇವೆ ಮತ್ತು ಅವುಗಳನ್ನು ತಾನು ಶೀಘ್ರವೇ ಸಲ್ಲಿಸುವುದಾಗಿ ಬಾಂಬೆ ಹೈಕೋರ್ಟಿಗೆ ತಿಳಿಸಿತ್ತು. ಆದರೆ ಸಿಬಿಐ ತಾನು ಹೇಳಿದ ಪ್ರಕಾರ ಯಾವುದೇ ಸಾಕ್ಷ್ಯವನ್ನು ಸಲ್ಲಿಸಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ