ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮೀಸಾ ಭಾರ್ತಿ ವಿರುದ್ಧ ಇಡಿ ಚಾರ್ಜ್ ಶೀಟ್

Srinivas Rao BV
ನವದೆಹಲಿ: ರಾಷ್ಟ್ರೀಯ ಜನತಾದಳದ ಸಂಸದೆ ಮೀಸಾ ಭಾರ್ತಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ದಾಖಲಿಸಿದೆ. 
8,000 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಆರೋಪ ಮೀಸಾ ಭಾರ್ತಿ ವಿರುದ್ಧ ಕೇಳಿಬಂದಿದ್ದು, ಜಾರಿ ನಿರ್ದೇಶನಾಲಯ ಅಕ್ರಮ ಹಣಾ ವರ್ಗಾವಣೇ ತಡೆ ಕಾಯ್ದೆಯ ಪ್ರಕಾರ , ಪಟಿಯಾಲ ಕೋರ್ಟ್ ನ ವಿಶೇಷ ನ್ಯಾಯಾಧೀಶರಿಗೆ ಚಾರ್ಜ್ ಶೀಟ್ ನ್ನು ಸಲ್ಲಿಸಿದೆ.  
ಜುಲೈ ನಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀಸಾ ಭಾರ್ತಿ ಅವರ ಅಕೌಂಟೆಂಟ್ ವಿರುದ್ಧ ಹೆಚ್ಚುವರಿ ಚಾರ್ಜ್ ಶೀಟ್ ದಾಖಲಿಸಿ, ಉದ್ಯಮಿಗಳಾದ ಸುರೆಂದ್ರ ಜೈನ್, ವಿರೇಂದ್ರ ಜೈನ್ ಸೇರಿ 35 ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿತ್ತು,  
ಸುರೇಂದ್ರ ಜೈನ್ ಹಾಗೂ ವಿರೇಂದ್ರ ಜೈನ್ ಅವರ ನೆರವಿನಿಂದ ಕಪ್ಪು ಹಣವನ್ನು ಕಾನೂನುಬದ್ಧ ಹಣವನ್ನಾಗಿ ಮಾರ್ಪಾಡು ಮಾಡಲಾಗುತ್ತಿದ್ದ ಆರೋಪ ಅಕೌಂಟೆಂಟ್ ಅಗರ್ವಾಲ್ ವಿರುದ್ಧ ಕೇಳಿಬಂದಿದೆ. ಅಷ್ಟೇ ಅಲ್ಲದೇ ಮೀಸಾ ಭಾರ್ತಿ ಅವರ ಪತಿಯ ಕಂಪನಿಗೂ ಸಹಾಯ ಮಾಡಿರುವ ಆರೋಪವಿದ್ದು, ಕಳೆದ ತಿಂಗಳು ಇಡಿ ಮೀಸಾ ಭಾರ್ತಿ ಅವರನ್ನು ವಿಚಾರಣೆಗೊಳಪಡಿಸಿತ್ತು.
SCROLL FOR NEXT