ಮುಂಬೈ: ತನ್ನ ಪತ್ನಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಭಾರತೀಯ ಯೋಧರೊಬ್ಬರು ಮಹಿಳೆಯೊಬ್ಬರಿಗೆ ಚಪ್ಪಳಿ ಹಾರ ಹಾಕಿ ಊರಿನಲ್ಲಿ ಪ್ರದರ್ಶನ ಮಾಡಿಸಿದ ಆರೋಪದ ಮೇಲೆ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ.
ಒಸ್ಮಾನಾಬಾದ್ ಜಿಲ್ಲೆಯ ಉಮರ್ಗಾದ ಅಲೂರ್ ಗ್ರಾಮದ ಯೋಧ ಶಿವನಂದಾ ಸ್ವಾಮಿ ಅದೇ ಊರಿನ 55 ವರ್ಷದ ಮಹಿಳೆಗೆ ಚಪ್ಪಲಿ ಹಾರ ಹಾಕಿಸಿ ಗ್ರಾಮದ ಮಧ್ಯೆ ಸುತ್ತು ಹಾಕಿಸಿದ್ದರಿಂದ ಮುರುಂ ಪೊಲೀಸರು ಸ್ವಾಮಿಯನ್ನು ಬಂಧಿಸಿದ್ದಾರೆ.
ಯೋಧನನ್ನು ಬಂಧಿಸಿದ್ದು ಆತನ ವಿರುದ್ಧ ಐಪಿಸಿ ಸೆಕ್ಷನ್ 354, 355, 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಶೇಕ್ ಹೇಳಿದ್ದಾರೆ.