ದೇಶ

ಚುನಾವಣೆಗೆ ಸ್ಪರ್ಧಿಸುವ ವಯಸ್ಸಿನ ಮಿತಿ 21 ಅಥವಾ 18ಕ್ಕೆ ಇಳಿಸಬೇಕು: ಆದಿತ್ಯ ಠಾಕ್ರೆ

Lingaraj Badiger
ಮುಂಬೈ: ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ವಯಸ್ಸಿನ ಮಿತಿ ಕನಿಷ್ಠ 21 ಅಥವಾ 18ಕ್ಕೆ ಇಳಿಸಬೇಕು ಎಂದು ಯುವ ಸೇನಾ ಅಧ್ಯಕ್ಷ ಆದಿತ್ಯ ಠಾಕ್ರೆ ಅವರು ಶನಿವಾರ ಒತ್ತಾಯಿಸಿದ್ದಾರೆ.
ಪ್ರಸ್ತುತ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗೆ ಸರ್ಧಿಸಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು ಎಂಬ ನಿಯಮವಿದೆ.
18ನೇ ವಯಸ್ಸಿಗೆ ಮತ ಹಾಕಲು ಅವಕಾಶವಿರಬೇಕಾದರೆ 18ನೇ ವಯಸ್ಸಿಗೆ ಚುನಾವಣೆಗೆ ಏಕೆ ಸ್ಪರ್ಧಿಸಬಾರದು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಪ್ರಶ್ನಿಸಿದ್ದಾರೆ.
ಕೆಲವು ದೇಶಗಳಲ್ಲಿ 18ನೇ ವಯಸ್ಸಿಗೆ ಚುವಾವಣೆಗೆ ಸ್ಪರ್ಧಿಸಲು ಅವಕಾಶವಿದೆ. ನಮ್ಮ ಯುವಕರು ಸಹ ದೇಶದಲ್ಲಿ ಬದಲಾವಣೆ ತರುವ ಸಾಮರ್ಥ್ಯ ಮತ್ತು ಸಾಕಷ್ಟು ಒಳ್ಳೆಯ ವಿಚಾರಗಳನ್ನು ಹೊಂದಿದ್ದಾರೆ ಎಂದು ಅದಿತ್ಯ ಠಾಕ್ರೆ ಅವರು ಟ್ವೀಟ್ ಮಾಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವ ವಯಸ್ಸಿನ ಮಿತಿ ಇಳಿಸುವುದರಿಂದ ಯುವಕರಿಗೆ ಸಹಾಯವಾಗಲಿದೆ ಮತ್ತು ಅವರು ಶಾಸಕಾಂಗದ ಭಾಗವಾಗಲಿದ್ದಾರೆ ಎಂದು ಪಿಟಿಐಗೆ ತಿಳಿಸಿದ್ದಾರೆ.
SCROLL FOR NEXT