ಗುರುಗ್ರಾಮ: 8 ವರ್ಷದ ಬಾಲಕನಿಗೆ ಡೆಂಗ್ಯೂ ಚಿಕಿತ್ಸೆ ನೀಡಿದ್ದ ಗುರುಗ್ರಾಮ ಮೂಲದ ಆಸ್ಪತ್ರೆಯೊಂದು ರೂ.15.88 ಲಕ್ಷ ಬಿಲ್ ಮಾಡಿರುವ ಘಟನೆಯೊಂದು ಭಾನುವಾರ ಬೆಳಕಿಗೆ ಬಂದಿದೆ.
ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಕಳೆದ 21 ದಿನಗಳಿಂದ ಬಾಲಕನೊಬ್ಬ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೃತಪಟ್ಟಿದ್ದಾನೆ. ಆದರೂ ಆಸ್ಪತ್ರೆ ಮಾತ್ರ ರೂ. 15.88 ಲಕ್ಷ ಬಿಲ್ ಕಟ್ಟುವಂತೆ ಸೂಚನೆ ನೀಡಿದೆ
ಮಗುವನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಪೋಷಕರು ಇತ್ತ ಮಗುವೂ ಇಲ್ಲದೆ, ಅತ್ತ ಹಣವೂ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿಕೊಳ್ಳುವಂತಾಗಿದೆ. ಈ ನಡುವೆಯ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಾಲಕನ ಕುಟುಂಬಸ್ಥರು ಚಿಕಿತ್ಸೆಯ ನೆಪದಲ್ಲಿ ಆಸ್ಪತ್ರೆ ಲೂಟಿ ಮಾಡುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಸಾದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುಗ್ರಾಮ ಮೇದಾಂತ ಆಸ್ಪತ್ರೆಯ ವಿರುದ್ಧ ದೂರಿನಲ್ಲಿ ಆರೋಪ ಮಾಡಲಾಗಿದೆ ಎಂದು ಗುರುಗ್ರಾಮ ಪೊಲೀಸ್ ಪಿಆರ್'ಒ ಹೇಳಿದ್ದಾರೆ.
ಮೃತ ಬಾಲಕನ ತಂದೆ ಮಾತನಾಡಿ, ಕಳೆದ 21 ದಿನಗಳಿಂದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಗುತ್ತಿತ್ತು. ಇದೀಗ ಆಸ್ಪತ್ರೆ ರೂ.15.88 ಲಕ್ಷ ಬಿಲ್ ನೀಡಿದೆ. ನಮ್ಮ ಬಳಿ ಹಣವಿಲ್ಲ. ಇದೀಗ ನಾವು ಹಣ ಸಹಾಯಕ್ಕಾಗಿ ಜನರ ಮೊರೆ ಹೋಗಬೇಕಿದೆ. ಚಿಕಿತ್ಸೆ ಹೆಸರನಲ್ಲಿ ಆಸ್ಪತ್ರೆಯ ನಮ್ಮನ್ನು ಲೂಟಿ ಮಾಡಿದೆ ಎಂದು ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಯೊಬ್ಬಳಿಗೆ ರೂ.16 ಲಕ್ಷ ಚಿಕಿತ್ಸಾ ವೆಚ್ಚವನ್ನು ಭರಿಸುವಂತೆ ಸೂಚಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics