ದೇಶ

ಆಂಧ್ರಪ್ರದೇಶ: ದೇವಾಲಯಗಳಲ್ಲಿ ಹೊಸ ವರ್ಷ ಆಚರಣೆಗೆ ಸರ್ಕಾರದಿಂದ ನಿರ್ಬಂಧ!

Srinivas Rao BV
ವಿಜಯವಾಡ: ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿಯನ್ನು ಹೊಸ ವರ್ಷ ಎಂದು ಆಚರಿಸುತ್ತೇವೆ. ಇಂಗ್ಲೀಷ್ ಕ್ಯಾಲೆಂಡರ್ ನ ಪ್ರಕಾರ ಜ.1 ರಂದು ಹೊಸ ವರ್ಷಾಚರಣೆ ಮಾಡಲಾಗುತ್ತದೆ, ಈ ಆಚರಣೆಗಳು ಇತ್ತೀಚಿನ ದಿನಗಳಲ್ಲಿ ದೇವಾಲಯಗಳಲ್ಲಿಯೂ ಸಾಮಾನ್ಯವಾಗಿದ್ದು, ಆಂಧ್ರಪ್ರದೇಶದ ಸರ್ಕಾರ ದೇವಾಲಯಗಳಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದೆ.  
ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ಆಂಧ್ರಪ್ರದೇಶದ ಧಾರ್ಮಿಕ ದತ್ತಿ ಇಲಾಖೆ ಜ.1 ರಂದು ಹೊಸ ವರ್ಷಾಚರಣೆ ನಡೆಸುವುದನ್ನು ಪಾಶ್ಚಿಮಾತ್ಯ ಸಂಸ್ಕೃತಿ ಎಂದು ಹೇಳಿದ್ದು ದೇವಾಲಯಗಳಲ್ಲಿ ಹೊಸ ವರ್ಷಾಚರಣೆ  ನಡೆಸದಂತೆ ಸುತ್ತೋಲೆ ಹೊರಡಿಸಿದೆ. 
ಇಲಾಖೆಯ ಹಿಂದೂ ಧರ್ಮ ಪರಿರಕ್ಷಣ ಟ್ರಸ್ಟ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜ.1 ರಂದು ಹೊಸ ವರ್ಷಾಚರಣೆಯ ಪ್ರಯುಕ್ತ ಸ್ವಾಗತ ಸೂಚಿಸುವ ಬ್ಯಾನರ್ ಗಳನ್ನು ಹಾಕುವುದು ಹಾಗೂ ಹೂವಿನ ಅಲಂಕಾರಗಳನ್ನು ಮಾಡುವುದನ್ನು ದೇವಾಲಯಗಳು ನಿಲ್ಲಿಸಬೇಕು. ತೆಲುಗು ಮಾತನಾಡುವ ಮಂದಿಗೆ ಯುಗಾದಿ ದಿನದಂದು ಹೊಸ ವರ್ಷಾಚರಣೆಯಾದ್ದರಿಂದ ಅಂದು ಆಚರಣೆ ನಡೆಸಬೇಕು ಎಂದು ಹೇಳಿದೆ. 
SCROLL FOR NEXT