ದೇಶ

ನಾಳೆ ಕ್ರಿಸ್ ಮಸ್ ಹಬ್ಬ: ಭರದ ಸಿದ್ಧತೆಯಲ್ಲಿ ತೊಡಗಿರುವ ನಾಗರಿಕರು

Sumana Upadhyaya
ನವದೆಹಲಿ: ಕ್ರಿಸ್ ಮಸ್ ಹಬ್ಬದ ಆಚರಣೆಗೆ ದೇಶಾದ್ಯಂತ ಭರದ ಸಿದ್ಧತೆ ನಡೆಯುತ್ತಿದ್ದು, ಜೀಸಸ್ ಕ್ರೈಸ್ತನ ಹುಟ್ಟುಹಬ್ಬವನ್ನು ಸಂಭ್ರಮ-ಸಡಗರಗಳಿಂದ ಆಚರಿಸಲು ಜನರು ಕಾತರದಿಂದ ಕಾಯುತ್ತಿದ್ದಾರೆ.
ಕ್ರಿಸ್ ಮಸ್ ಹಬ್ಬ ಕೇವಲ ಕ್ರೈಸ್ತ ಧರ್ಮದವರಿಗೆ ಮಾತ್ರವಲ್ಲದೆ ಇಡೀ ಸಮಾಜದ ಬಾಂಧವರು ಆಚರಿಸುವ ಒಂದು ಹಬ್ಬವೆನಿಸಿದೆ. ಜಾತಿ, ಧರ್ಮಗಳನ್ನು ಹೊರತುಪಡಿಸಿ ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಪ್ರಾರ್ಥಿಸುವುದು ಕ್ರಿಸ್ ಮಸ್ ಹಬ್ಬ ಆಚರಣೆಯ ಮುಖ್ಯ ಸಂದೇಶವಾಗಿದೆ.
ಕ್ರಿಸ್ ಮಸ್, ಹೊಸ ವರ್ಷದ ಸಂದರ್ಭದಲ್ಲಿ ಸಾಲು, ಸಾಲು ರಜೆಗಳು ಬರುವುದರಿಂದ ನಗರ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಸಂಭ್ರಮದಿಂದ ಜನರು ಹಬ್ಬ ಆಚರಿಸುತ್ತಾರೆ.
ದೇಶದ ಹಲವು ಕಡೆಗಳಲ್ಲಿ ಮಾರುಕಟ್ಟೆಗಳಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಸಂಬಂಧಿಸಿದ ಅಲಂಕಾರಿಕ ವಸ್ತುಗಳ ಮಾರಾಟ ಭರದಿಂದ ನಡೆಯುತ್ತಿದೆ. 
ಸಂತ ಕ್ಲಾಸ್ ನ ಕಟೌಟ್ ಗಳು, ಕ್ರಿಸ್ ಮಸ್ ಸ್ಟಾರ್ ವಿವಿಧ ಬಣ್ಣ ಮತ್ತು ಆಕಾರಗಳಲ್ಲಿ, ದೀಪಗಳ ವ್ಯಾಪಾರಗಳು ಮಾರುಕಟ್ಟೆಗಳಲ್ಲಿ ಭರ್ಜರಿಯಾಗಿ ನಡೆಯುತ್ತಿವೆ. ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಈ ವರ್ಷ ಕ್ರಿಸ್ ಮಸ್ ನಲ್ಲಿ ವ್ಯಾಪಾರದ ಮೇಲೆ ಹೊಡೆತ ಬೀಳಬಹುದು ಎಂದು ವ್ಯಾಪಾರಿಗಳು ಹೇಳುತ್ತಿದ್ದರೂ ಕೂಡ ನಗರ ಪ್ರದೇಶಗಳಲ್ಲಿ ಎಂದಿನಂತೆ ವಹಿವಾಟು ನಡೆಯುವುದು ಕಂಡುಬರುತ್ತಿದೆ.
SCROLL FOR NEXT