ಅಟಲ್ ಬಿಹಾರಿ ವಾಜಪೇಯಿ 
ದೇಶ

ತೆರೆ ಮೇಲೆ ಬರಲಿದೆ ವಾಜಪೇಯಿ ಜೀವನಾಧಾರಿತ ಚಿತ್ರ 'ಯುಗಪುರುಷ'

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಹುಟ್ಟುಹಬ್ಬದಂದೆ ಅಜಾತ ಶತ್ರುವಿನ ಜೀವನ ಆಧಾರಿತ 'ಯುಗಪುರುಷ' ಚಿತ್ರ ಘೋಷಣೆಯಾಗಿದೆ.

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಹುಟ್ಟುಹಬ್ಬದಂದೆ ಅಜಾತ ಶತ್ರುವಿನ ಜೀವನ ಆಧಾರಿತ 'ಯುಗಪುರುಷ' ಚಿತ್ರ ಘೋಷಣೆಯಾಗಿದೆ.
ಸ್ಪೆಕ್ಟ್ರಂ ಮೂವೀಸ್ ಬ್ಯಾನರ್ ನಡಿ ರಾಜೀವ್ ಧಮಿಜಾ, ಅಮಿತ್ ಜೋಶಿ ಮತ್ತು ರಂಜೀತ್ ಶರ್ಮಾ ಅವರು ಯುಗಪುರುಷ ಚಿತ್ರ ನಿರ್ಮಿಸುತ್ತಿದ್ದು, ಬಸಂತ್ ಕುಮಾರ್ ಅವರು ಬರೆದ ಕಥೆಗೆ ಮಾಯಾಂಕ್ ಪಿ ಶ್ರೀವಾತ್ಸವ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
ವಾಜಪೇಯಿ ಅವರ ಕುಟುಂಬದ ಸಮ್ಮತಿ ಪಡೆದು ನಾವು ಯುಗಪುರುಷ ಚಿತ್ರ ಮಾಡುತ್ತಿದ್ದೇವೆ. ಈ ಸಂಬಂಧ ನಾವು ನಿರಂತರವಾಗಿ ಅವರ ಕುಟುಂಬ ಸದಸ್ಯರ ಸಂಪರ್ಕದಲ್ಲಿದ್ದೇವೆ. ವಾಜಪೇಯಿ ಜೀವನ ಆಧಾರಿತ ಚಿತ್ರ ನಿರ್ಮಿಸುವುದಕ್ಕೆ ಅವರ ಸೋದರ ಸೊಸೆ ಮಾಲಾ ತಿವಾರಿ ಅವರು ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಮಾಯಾಂಕ್ ಅವರು ತಿಳಿಸಿದ್ದಾರೆ.
ಯುಗಪುರುಷ ಅಟಲ್ ಗಾಗಿ ಬಪ್ಪಿ ಲಹಿರಿ ಅವರು ಹಾಡೊಂದನ್ನು ಸಂಕಲನ ಮಾಡಿದ್ದು, ಭಾರತ ರತ್ನ ಅಟಲ್ ಗಾಗಿ ಅವರ ಕವನ ಆಧರಿಸಿ ನಾನು ಒಂದು ಹಾಡು ಬರೆದಿದ್ದೇನೆ ಎಂದು ಲಹಿರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್