ದೇಶ

ತಯಾರಾದ ಆರು ವರ್ಷಗಳ ಬಳಿಕ ಬಾಳಾ ಠಾಕ್ರೆ ಮೇಣದ ಪ್ರತಿಮೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ

Raghavendra Adiga
ಲೋನವಾಳ: ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಬೃಹತ್ ಮೇಣದ ಪ್ರತಿಮೆ ತಯಾರಾಗಿ ಆರು ವರ್ಷಗಳ ಬಳಿಕ ಇದೀಗ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ. ಪುಣೆಯ ಲೋನವಾಳದ ಸುನಿಲ್ ಸೆಲೆಬ್ರಿಟಿ ವ್ಯಾಕ್ಸ್ ವಸ್ತುಸಂಗ್ರಹಾಲಯದಲ್ಲಿ ಈ ಪ್ರತಿಮೆ ಪ್ರದರ್ಶನಕ್ಕೆ ತೆರೆದುಕೊಂಡಿದೆ.
ಠಾಕ್ರೆಯವರ ಮೇಣದ ಪ್ರತಿಮೆಯು ಕಣ್ಣುಗಳಿಗೆ ಕಪ್ಪು ಕನ್ನಡಕ, ಕೇಸರಿ ಬಣ್ಣದ ಹೊಳಪುಳ್ಳ ರೇಷ್ಮೆ ಕುರ್ಟಾವನ್ನು ಚಿನ್ನದ ಬಣ್ಣದ ಗುಂಡಿಗಳೊಂದಿಗೆ ಮತ್ತು ಲುಂಗಿ ತೊಟ್ಟಿದ್ದನ್ನು ಕಾಣುತ್ತೇವೆ. ಕುಳಿತಿರುವ ಭಂಗಿಯ ಪ್ರತಿಮೆ ಬಲಗೈ ತೋರುಬೆರಳನ್ನು ಎತ್ತಿದ ಭಂಗಿಯಲ್ಲಿದ್ದು ಠಾಕ್ರೆ ತಮ್ಮ ಬೆಂಬಲಿಗರಿಗೆ ಆದೇಶಿಸುವ ಭಂಗಿಯಲ್ಲಿದೆ. 
"ಆರು ವರ್ಷಗಳ ಹಿಂದೆ ಬಾಳಾ ಸಾಹೇಬ್ ಅವರ ಈ ಪ್ರತಿಮೆಯನ್ನು ತಯಾರಿಸಲಾಗಿತ್ತು ಹಾಗೆಯೇ ಕಳೆದ ಆರು ವರ್ಷಗಳಲ್ಲಿ ಇದು ನಮ್ಮ ಸಂಗ್ರಹದಲ್ಲೇ ಇದ್ದರೂ ಕೆಲವರು ಅನುಮತಿ ನೀಡದ ಕಾರಣ ಸಾರ್ವಜನಿಕ ಪ್ರದರ್ಶನಕ್ಕೆ ಇಡಲು  ಸಾಧ್ಯವಾಗಲಿಲ್ಲ. ಠಾಕ್ರೆ 2012 ರ ನವೆಂಬರ್ ನಲ್ಲಿ ನಿಧನ ಹೊಂದಿದರು, ಈಗ ಪ್ರತಿಮೆ ಪ್ರದರ್ಶನಕ್ಕೆ ಸಮಯ ಒದಗಿ ಬಂದಿದೆ" ವಸ್ತುಸಂಗ್ರಹಾಲಯದ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಕಂಡಲ್ಲೂರು ಐಎಎನ್ ಎಸ್ ಗೆ ತಿಳಿಸಿದ್ದಾರೆ.
ಪ್ರತಿಮೆ ತಯಾರಾಗಿದ್ದರೂ ಶಿವಸೇನೆ ಯುವ ನಾಯಕ ಆದಿತ್ಯ ಠಾಕ್ರೆ ಅನುಮತಿಯಿಲ್ಲದೆ ಅದನ್ನು ಪ್ರದರ್ಶನಕ್ಕೆ ಇಡುವಂತಿರಲಿಲ್ಲ. ಅಂತಿಮವಾಗಿ ಭಾನುವಾರದಂದು ಆದಿತ್ಯ ಠಾಕ್ರೆ ಸುನೀಲ್ ಅವರ ವಸ್ತುಸಂಗ್ರಹಾಲಯಕ್ಕೆ ಆಗಮಿಸಿದರು. ಅವರು ಬಾಳಾ ಸಾಹೇಬ್ ಅವರ ಪ್ರತಿಮೆ ಕಂಡು ವಿಸ್ಮಿತರಾದರಲ್ಲದೆ ಅದನ್ನು ಪ್ರದರ್ಶಿಸಲು ಅನುಮತಿ ನೀಡೀದ್ದಾರೀ ಎಂದು ಸುನೀಲ್ ಹೇಳಿದ್ದಾರೆ.
SCROLL FOR NEXT