ದೇಶ

ಸುಗಮ ಸಂಸತ್ ಕಲಾಪಕ್ಕೆ ಬಿಜೆಪಿಯಿಂದ ಇಡ್ಲಿ-ವಡೆ ಕಾರ್ಯತಂತ್ರ

Raghavendra Adiga
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಒಂದು ವಾರದಿಂದ ನಡೆಯುತ್ತಿದ್ದು ಪ್ರತಿಪಕ್ಷಗಳು ಪ್ರತಿದಿನವೂ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಆದರೆ ಸರ್ಕಾರ ತಾನು ಸುಗಮ ಕಲಾಪ ನಡೆಸುವಂತಾಗಲು ಇದೀಗ ಹೊಸ ಮಾರ್ಗವೊಂದನ್ನು ಹುಡುಕಿದೆ.
ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಈ ಸಂಬಂಧ ರಾಜಿ ಮಾತುಕತೆ ನಡೆದಿದೆ. ಕೇಂದ್ರ ಸಚಿವ ವಿಜಯ್ ಗೋಯೆಲ್ ಮತ್ತು ಅರುಣ್ ಜೇಟ್ಲಿ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಮತ್ತು ಗುಲಾಮ್ ನಬಿ ಆಜಾದ್ ಅವರೊಡನೆ ಒಂದು ಗಂಟೆ ಕಾಲ ಸಭೆ ನಡೆಸಿದ್ದಾರೆ. ಆ ವೇಳೆ ನೀಡಲಾದ ಸಂಧಾನ ಸೂತ್ರಕ್ಕ ಎರಡೂ ಕಡೆಯ ನಾಯಕರು ಒಪ್ಪಿದ್ದಾರೆ.
ಕ್ರಿಸ್ ಮಸ್ ರಜೆಯ ನಂತರ ಸದನ ಪುನಃ ಸಭೆ ಸೇರಿದಾಗ ನಾಳೆ (ಬುಧವಾರ) ಬೆಳಿಗ್ಗೆ ಈ ಸಂಬಂಧ ಹೇಳಿಕೆ ನೀಡಲಾಗುತ್ತದೆ. ಆ ಸಮಯದಲ್ಲಿ ಪ್ರಧಾನಮಂತ್ರಿ ಸಹ ರಾಜ್ಯಸಭೆಯಲ್ಲಿ ಉಪಸ್ಥಿತರಾಗಿರುತ್ತಾರೆ. ಆದರೆ ಡಾ ಸಿಂಗ್ ಅವರ ಕುರಿತ ಟೀಕೆಗಳಿಗೆ ಅವರು ಕ್ಷಮೆ ಯಾಚಿಸುವುದಿಲ್ಲ. ಈ ಹಂತದಲ್ಲಿ ಕಾಂಗ್ರೆಸ್ ತನ್ನ ವೈಯುಕ್ತಿಕ ಬದ್ದತೆಗಾಗಿ ಡಾ. ಸಿಂಗ್ ಅವರ ಕ್ಷಮೆಯಾಚನೆ ಕುರಿತ ತನ್ನ ನಿಲುವನ್ನು ತುಸು ಸಡಿಲಗೊಳಿಸಲು ಒಪ್ಪಿಕೊಂಡಿದೆ. ಇದನ್ನು ಸಭೆ ಅನುಮೋದಿಸಿದೆ. ಆಂಧ್ರ ಶೈಲಿಯ ಉಪ್ಪಿಟ್ಟು, ಇಡ್ಲಿ-ವಡಾ ಬೆಳಗಿನ ಉಪಹಾರದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರನ್ನು ಕರೆದೊಯ್ಯುವ ಮೂಲಕ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಸಹ ಈ ಸಂಧಾನ ಮಾತುಕತೆಗೆ ದಾರಿ ಮಾಡಿಕೊಟ್ಟರು.
ಡಿಸೆಂಬರ್ 15 ರಂದು ರಾಜ್ಯಸಭೆಯ ಚಳಿಗಾಲದ ಅಧಿವೇಶನವು ಪ್ರಾರಂಬಗೊಂಡಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧದ ಮೋದಿ ಅವರ ಟೀಕೆಗಳಿಗೆ ಪ್ರಧಾನಿ ಖುದ್ದಾಗಿ ಕ್ಷಮೆ ಯಾಚಿಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದ್ದು ಕಲಾಪಕ್ಕೆ ಪದೇಪದೇ ಅಡ್ಡಿಯುಂಟುಮಾಡುತ್ತಿದ್ದವು.
SCROLL FOR NEXT