ಯೋಧರ ಗುಂಡೇಟಿಗೆ ಬಲಿಯಾದ ಕುಬ್ಜ ಉಗ್ರ ಬಿಜೆಪಿಗೆ ಸೇರಲು ಯತ್ನಿಸಿದ್ದ!
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ 4 ಅಡಿ ಎತ್ತರದ ಕುಬ್ಜ ಉಗ್ರ ಬಿಜೆಪಿಗೆ ಸೇರ್ಪಡೆಯಾಗಲು...
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ 4 ಅಡಿ ಎತ್ತರದ ಕುಬ್ಜ ಉಗ್ರ ಬಿಜೆಪಿಗೆ ಸೇರ್ಪಡೆಯಾಗಲು ಯತ್ನಿಸಿದ್ದ ಎನ್ನುವ ಅಂಶ ಇದೀಗ ಬಹಿರಂಗಗೊಂಡಿದೆ.
ಪಾಕ್ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ನೂರ್ ಮೊಹಮ್ಮದ್ 2003ರಲ್ಲಿ ದೆಹಲಿಯ ಬಿಜೆಪಿ ಮುಖ್ಯ ಕಚೇರಿಗೆ ಭೇಟಿ ನೀಡಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯಲೂ ಯತ್ನ ನಡೆಸಿದ್ದ ಆ ಮೂಲಕ ಬಿಜೆಪಿಗೆ ಸೇರಿಯಲ್ಲಿ ಕೆಲ ನಾಯಕರ ಹತ್ಯೆಗೈಯುವ ಸಂಚು ರೂಪಿಸಿದ್ದ ಎಂಬುದನ್ನು ಡಿಎನ್ಎ ವರದಿ ಮಾಡಿದೆ.
ಉಗ್ರ ನೂರ್ ಮೊಹಮ್ಮದ್ ನ ಯೋಜನೆ ಕಾರ್ಯರೂಪಕ್ಕೆ ಬರುವ ಮೊದಲೆ ದೆಹಲಿಯ ಎಟಿಎಸ್ ಪೊಲೀಸರು ಆತನನ್ನು ಬಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ವಶಕ್ಕೆ ಪಡೆದಿದ್ದರು. 47 ವರ್ಷ ವಯಸ್ಸಿನ ಕುಬ್ಜನಾಗಿದ್ದ ನೂರ್ ಮೊಹಮ್ಮದ್ ಕಣಿವೆ ರಾಜ್ಯದಲ್ಲಿ ಹಲವೆಡೆ ಉಗ್ರ ಚಟುವಟಿಕೆ ಚಿಗುರಲು ಕಾರಣನಾಗಿದ್ದ. ಈ ಕಾರಣಕ್ಕಾಗಿಯೇ ಈತನನ್ನು ದೆಹಲಿ ನ್ಯಾಯಾಲಯವೊಂದು ಸಾವಿನ ವ್ಯಾಪಾರಿ ಎಂದು ಬಣ್ಣಿಸಿತ್ತು.
ಭಾರತೀಯ ಯೋಧರು ಪುಲ್ವಾಮಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರ ನೂರ್ ಮೊಹಮ್ಮದ್ ತಾಂತ್ರಿ ಮತ್ತು ಸಂಘಟನೆಗೆ ಸೇರಿದ ಇನ್ನೋರ್ವ ಪ್ರಮುಖ ನನ್ನು ಹತ್ಯೆ ಮಾಡಿದ್ದರು.