ಜಾದವ್ ಭೇಟಿ ಮಾಡಿದ ತಾಯಿ ಆವಂತಿ ಯಾದವ್ ಮತ್ತು ಪತ್ನಿ ಚೇತನಾ ಜಾದವ್ (ಸಂಗ್ರಹ ಚಿತ್ರ) 
ದೇಶ

ಕುಲಭೂಷಣ್ ಜಾದವ್ ಭೇಟಿ ವೇಳೆ ಪಾಕಿಸ್ತಾನದಲ್ಲಿ ನಡೆದ ಘಟನಾವಳಿಗಳಿಂದ ತಾಯಿ ಪತ್ನಿಗೆ ಆಘಾತ

ಕುಲಭೂಷಣ್ ಜಾದವ್ ಭೇಟಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಜಾದವ್ ತಾಯಿ ಮತ್ತು ಪತ್ನಿ ಭಾರತಕ್ಕೆ ಮರಳಿದ ಬಳಿಕ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಜಾದವ್ ಸಂಬಂಧಿಕರು ಹೇಳಿದ್ದಾರೆ.

ನವದೆಹಲಿ: ಕುಲಭೂಷಣ್ ಜಾದವ್ ಭೇಟಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಜಾದವ್ ತಾಯಿ ಮತ್ತು ಪತ್ನಿ ಭಾರತಕ್ಕೆ ಮರಳಿದ ಬಳಿಕ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಜಾದವ್ ಸಂಬಂಧಿಕರು ಹೇಳಿದ್ದಾರೆ.
ಜಾದವ್ ಭೇಟಿ ಬಳಿಕ ಭಾರತಕ್ಕೆ ಮರಳಿರುವ ಜಾದವ್ ತಾಯಿ ಆವಂತಿ ಯಾದವ್ ಮತ್ತು ಪತ್ನಿ ಚೇತನಾ ಜಾದವ್ ಖಿನ್ನತೆಗೆ ಒಳಗಾಗಿದ್ದು, ಪಾಕಿಸ್ತಾನ ಅವರನ್ನು ನಡೆಸಿಕೊಂಡ ರೀತಿ ಅವರಿಗೆ ಆಘಾತವನ್ನುಂಟು ಮಾಡಿದೆ. ಈ  ಘಟನೆಯಿಂದಾಗಿ ನಮಗೆ ನಿಜಕ್ಕೂ ಆಘಾತವಾಗಿದ್ದು, ಪಾಕಿಸ್ತಾನದ ಅಧಿಕಾರಿಗಳು ಮಾನವೀಯತೆ ತೋರುವ ನೆಪದಲ್ಲಿ ತಮ್ಮ ಕ್ರೂರತೆಯನ್ನು ತೋರಿದ್ದಾರೆ. ಇದು ಅಂತಾರಾಷ್ಟ್ರೀಯ ವಿಚಾರವಾಗಿದ್ದು ಈ ಬಗ್ಗೆ ನಾನು ಹೆಚ್ಚು  ಏನನ್ನೂ ಹೇಳಲಿಚ್ಛಿಸುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಜಾದವ್ ಸಂಬಂಧಿಕರೊಬ್ಬರು ತಿಳಿಸಿದ್ದಾರೆ. 
ಇನ್ನು ಈ ಹಿಂದೆ ಕುಲಭೂಷಣ್ ಜಾದವ್ ಭೇಟಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ತಾಯಿ ಆವಂತಿ ಯಾದವ್ ಮತ್ತು ಪತ್ನಿ ಚೇತನಾ ಜಾದವ್ ಅವರನ್ನು ಪಾಕ್ ಅಧಿಕಾರಿಗಳು ನಡೆಸಿಕೊಂಡ ರೀತಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.  ಸ್ವತಃ ಪಾಕಿಸ್ತಾನವೇ ಒಪ್ಪಿಕೊಂಡಿರುವಂತೆ ಜಾದವ್ ಪತ್ನಿ ಮಂಗಳಸೂತ್ರ, ಸಿಂಧೂರ ಮತ್ತು ಶೂಗಳನ್ನು ತೆಗೆಸಲಾಗಿತ್ತು. ಸಂಶದ ಮೇಲೆ ಜಾದವ್ ಪತ್ನಿಯ ಶೂ ಪಡೆದಿದ್ದ ಅಧಿಕಾರಿಗಳು ಅದನ್ನು ಅವರಿಗೆ ವಾಪಸ್ ಮರಳಿಸಿಲ್ಲ.  ಇನ್ನು ಜಾದವ್ ಭೇಟಿ ವೇಳೆ ಗ್ಲಾಸ್ ನ ಹಿಂಬದಿಯಲ್ಲಿ ಇರಿಸಿ ಮಾತನಾಡಿಸಿದ್ದು, ಅಮಾನವೀಯವಾದದ್ದು. ಅಲ್ಲದೆ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ನೀಡದೇ ಆಂಗ್ಲ ಭಾಷೆಯಲ್ಲೇ ಮಾತನಾಡಬೇಕು ಎಂದು  ಸೂಚಿಸಲಾಗಿತ್ತು. ಇದು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.
ಅಂತೆಯೇ ಭೇಟಿ ಬಳಿಕ ಹೊರ ಬಂದ ತಾಯಿ ಮತ್ತು ಪತ್ನಿಗೆ ಪಾಕ್ ಮಾಧ್ಯಮಗಳು ಕೇಳಿದ ಪ್ರಶ್ನೆಗಳೂ ಕೂಡ ಆಘಾತವನ್ನುಂಟು ಮಾಡಿದ್ದು, ತಮ್ಮ ಪುತ್ರ ಸಾಮೂಹಿಕ ಕೊಲೆಗಾರ, ಭಯೋತ್ಪಾದಕ. ನೀವು ಭಯೋತ್ಪಾದಕನ  ತಾಯಿ ಮತ್ತು ಪತ್ನಿ ಎಂದು ಪಾಕ್ ಮಾಧ್ಯಮಗಳು ಹೀಯಾಳಿಸುವ ರೀತಿಯಲ್ಲಿ ಪ್ರಶ್ನೆ ಮಾಡಿದ್ದವು ಎಂದು ವರದಿಯಾಗಿತ್ತು. ಈ ಎಲ್ಲ ಘಟನೆಗಳು ಪತ್ನಿ ಮತ್ತು ತಾಯಿ ಅವರಿಗೆ ಆಘಾತವನ್ನುಂಟು ಮಾಡಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್