ಸಂಗ್ರಹ ಚಿತ್ರ 
ದೇಶ

ಬಿಂದಿ, ತಾಳಿ ತೆಗೆದಿಟ್ಟು ಬಂದಿದ್ದ ತಾಯಿಯ ಕಂಡು ಜಾದವ್ ಗೆ ಗಾಬರಿ: ಸುಷ್ಮಾ ಸ್ವರಾಜ್

ಪಾಕಿಸ್ತಾನದಲ್ಲಿ ತನ್ನ ತಾಯಿಯ ವೇಷ ಕಂಡು ಅವರು ವಿಧವೆಯಾಗಿದ್ದಾರೆ ಎಂದು ಕುಲಭೂಷಣ್ ಜಾದವ್ ಆಘಾತಗೊಂಡಿದ್ದ ಎಂದು ಕೇಂದ್ರ...

ನವದೆಹಲಿ: ಪಾಕಿಸ್ತಾನದಲ್ಲಿ ತನ್ನ ತಾಯಿಯ ವೇಷ ಕಂಡು ಅವರು ವಿಧವೆಯಾಗಿದ್ದಾರೆ ಎಂದು ಕುಲಭೂಷಣ್ ಜಾದವ್ ಆಘಾತಗೊಂಡಿದ್ದ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್ ಜಾದವ್ ಮತ್ತು ಅವರ ಪೋಷಕರ ಭೇಟಿ ಕುರಿತಂತೆ ಇದೇ ಮೊದಲ ಬಾರಿಗೆ ಕೇಂದ್ರ ವಿದೇಶಾಂಗ ಸಚಿವೆ ಸಂಸತ್ ನಲ್ಲಿ ಹೇಳಿಕೆ ನೀಡಿದ್ದು, ರಾಜ್ಯಸಭೆಯಲ್ಲಿ  ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ತನ್ನ ತಾಯಿಯ ವೇಷ ಕಂಡು ಅವರು ವಿಧವೆಯಾಗಿದ್ದಾರೆ ಎಂದು ಕುಲಭೂಷಣ್ ಜಾದವ್ ಆಘಾತಗೊಂಡಿದ್ದ ಎಂದು ಹೇಳಿದ್ದಾರೆ. ಪಾಕಿಸ್ತಾನದ ಅಧಿಕಾರಿಗಳು ಕುಲಭೂಷಣ್ ಜಾದವ್ ಅವರ  ತಾಯಿ ಆವಂತಿ ಯಾದವ್ ಅವರ ಮಂಗಳಸೂತ್ರ, ಸಿಂಧೂರ ಮತ್ತು ಒಡವೆಗಳನ್ನು ತೆಗಿಸಿದ್ದರು. ಬಳಿಕ ಜಾದವ್ ಭೇಟಿಗೆ ಅನುವು ಮಾಡಿಕೊಟ್ಟಿದ್ದರು. ಭಾರತೀಯ ಸಂಸ್ಕೃತಿಯಲ್ಲಿ ಗಂಡ ತೀರಿ ಹೋದಾಗ ಸಿಂಧೂರ, ತಾಳಿ  ತೆಗೆಯುತ್ತಾರೆ. ಹೀಗಾಗಿ ತಾಯಿ ವೇಷ ನೋಡಿ ಕುಲಭೂಷಣ್ ಜಾಧವ್ ಆಘಾತಗೊಂಡಿದ್ದ ಎಂದು ಸುಷ್ಮಾ ಹೇಳಿದ್ದಾರೆ.
ಸಂಸತ್ ಭವನಕ್ಕೆ ಆಗಮಿಸುವುದಕ್ಕೂ ಮುನ್ನ ನಾನು ಕುಲಭೂಷಣ್ ಜಾದವ್ ಅವರ ತಾಯಿ ಆವಂತಿ ಯಾದವ್ ಅವರೊಂದಿಗೆ ಮಾತನಾಡಿದ್ದೇನೆ. ಪಾಕಿಸ್ತಾನದಲ್ಲಿ ಅವರಿಗಾದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.  ಕುಲಭೂಷಣ್ ಜಾದವ್ ಅವರ ತಾಯಿಯನ್ನು ನೋಡುತ್ತಿದ್ದಂತೆಯೇ ತಂದೆ ಹೇಗಿದ್ದಾರೆ ಎಂದು ಭಯದಿಂದ ಕೇಳಿದ್ದನಂತೆ. ಇನ್ನು ಪಾಕ್ ಅಧಿಕಾರಿಗಳು ಆಕೆಯ ಬಳೆಗಳನ್ನು ಮತ್ತು ಮಂಗಳಸೂತ್ರವನ್ನು ತೆಗೆಯಲು ಸೂಚಿಸಿದ್ದರಂತೆ  ಎಂದು ಆವಂತಿ ಯಾದವ್ ಹೇಳಿದರು. ಕೇವಲ ಅದು ಮಾತ್ರವಲದೇ ಅವರು ಧರಿಸಿದ್ದ ಸಿಂಧೂರವನ್ನೂ ತೆಗೆಯಲು ಅಧಿಕಾರಿಗಳು ಹೇಳಿದ್ದರು ಎಂದು ಸುಷ್ಮಾ ಸ್ವರಾಜ್ ರಾಜ್ಯಸಭೆಗೆ ಮಾಹಿತಿ ನೀಡಿದರು.
ಅಂತೆಯೇ ಪಾಕಿಸ್ತಾನಿ ಅಧಿಕಾರಿಗಳ ನಡೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಸುಷ್ಮಾ ಸ್ವರಾಜ್, ಜಾದವ್ ಪತ್ನಿ ಚೇತನಾ ಜಾದವ್ ಧರಿಸಿದ್ದ ಶೂನಲ್ಲಿ ಕ್ಯಾಮೆರಾ ಅಥವಾ ರೆಕಾರ್ಡಿಂಗ್ ಉಪಕರಣ ಅಡಗಿಸಿಟ್ಟಿರಬಹುದು  ಎಂದು ಪಾಕ್ ಶಂಕೆಗೊಂಡಿದೆ. ಇದೇ ಕಾರಣಕ್ಕೆ ಚೇತನಾ ಅವರ ಶೂಗಳನ್ನು ತೆಗೆಸಿ ಅವರಿಗೆ ಚಪ್ಪಲಿ ನೀಡಿತ್ತು ಎಂದು ಸ್ವರಾಜ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ