2014 ರಲ್ಲಿ ಅಧಿಕಾರಕ್ಕೆ ಬರುತ್ತಲೇ ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ರಾಷ್ಟ್ರದ ಜನತೆಯ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿದ್ದ ಅದೆಷ್ಟೋ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದ್ದವು, ಹಲವು ವಿಷಯಗಳು ಟ್ವಿಟರ್ ನಲ್ಲಿ ಟ್ರೆಂಡಿಂಗ್ ಟಾಪಿಕ್ ಸಹ ಆಗಿತ್ತು. ಒಟ್ಟಾರೆ ಟ್ವಿಟರ್ ನಲ್ಲಿ 2017 ರಲ್ಲೇ ಅತಿ ಹೆಚ್ಚು ಟ್ರೆಂಡ್ ಆಗಿದ್ದ ಹ್ಯಾಷ್ ಟ್ಯಾಗ್ ಯಾವ್ದಪ್ಪಾ ಅಂದ್ರೆ ಅದು ಮನ್ ಕಿ ಬಾತ್!
ಟ್ವಿಟರ್ ನಲ್ಲಿ ಮನ್ ಕಿ ಬಾತ್ ನಂತರದ ಅತಿ ಹೆಚ್ಚು ಟ್ರೆಂಡಿಂಗ್ ಆಗಿದ್ದ ಹ್ಯಾಷ್ ಟ್ಯಾಗ್ ಗಳಾವುದೆಂದರೆ ಜೆಲ್ಲಿಕಟ್ಟು, ಜಿಎಸ್ ಟಿ ಎಂದು ಸ್ವತಃ ಟ್ವಿಟರ್ ತಿಳಿಸಿದೆ. ಮನ್ ಕಿ ಬಾತ್ ಬಗ್ಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡ್ಕೂಲರ್ ಟ್ವೀಟ್ ಮಾಡಿದ್ದು ಸಹ ವರಲ್ ಆಗಿತ್ತು.
ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳ ಕೊನೆಯ ಶನಿವಾರದಂದು ಮನ್ ಕಿ ಬಾತ್ ರೆಡಿಯೋ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಮುಂಬೈ ರೈನ್ಸ್ ತ್ರಿವಳಿ ತಲಾಖ್, ಡಿಮಾನಿಟೈಸೇಷನ್, ಸ್ವಚ್ಛ ಭಾರತ, ಉತ್ತರ ಪ್ರದೇಶ, ಗುಜರಾತ್ ಚುನಾವಣೆ, ಆಧಾರ್ ಸಹ 2017 ರಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದ್ದ ವಿಷಯಗಳಾಗಿವೆ.