ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂದ ಅಹಮದ್ ಪಟೇಲ್ ಅವರ ಅಳಿಯ ಗುಜರಾತ್ ಮೂಲದ ಸ್ಯಾಂಡೇಸರ್ ಗ್ರೂಪ್ ನ ಮಾಲೀಕರಿಂದ ಹಣ ಸ್ವೀಕರಿಸುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರು ತೆರಿಗೆ ತಪ್ಪಿಸುವ ಸಲುವಾಗಿ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ ಎಂದು ಇಡಿ ಆರೋಪಿಸಿದೆ.
ಸ್ಯಾಂಡೇಸರ್ ಗ್ರೂಪ್ ಉದ್ಯೋಗಿಯಾದ ಸುನಿಲ್ ಯಾದವ್ ಅವರು ಈ ಕುರಿತಾದ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದು ಇದರ ಒಂದು ಪ್ರತಿಯನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಹ ನಿಡಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆಯ 50 (2) ವಿಭಾಗದ ಅನುಸಾರ ಯಾದವ್ ಅವರ ಹೇಳಿಕೆಯನ್ನು ನ್ಯಾಯಾಲಯ ಒಪ್ಪಿಕೊಳ್ಳಬಹುದಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾಋಎ.
ಸ್ಯಾಂಡೇಸರ್ ಗ್ರೂಪ್ ಸಂಸ್ಥೆಯ ನಿರ್ದೇಶಕರಾಗಿರುವ ಚೇತನ್ ಸಂದೇಶೇರಾ, ದೆಹಲಿ ಮೂಲದ ಉದ್ಯಮಿ ಗಗನ್ ಧವನ್ ಅವರು ಹಣ ತುಂಬಿದ್ದ ಚೀಲದೊಡನೆ ಪಟೇಲ್ ಅಳಿಯನ ಮನೆಗೆ ತೆರಳಿದ್ದರು. ಈ ಒಪ್ರಕರಣ ಸಂಬಂಧ ಧವನ್ವರನ್ನು ಇತ್ತೀಚೆಗೆ ಬಂಧಿಸಲಾಗಿದೆ. ಯಾದವ್ ಹೇಳುವಂತೆ ಇದುವರೆಗೆ ನಾಲ್ಕರಿಂದ ಐದು ಬಾರಿ ಇದೇ ರೀತಿ ಹಣ ಸ್ವೀಕರಿಸಲಾಗಿದೆ. ಸುಮಾರು ಹದಿನೈದರಿಂದ ಇಪ್ಪತ್ತೈದು ಲಕ್ಷ ರೂ. ಒಮ್ಮೆಗೆ ಪಡೆಯಲಾಗುತ್ತಿದೆ ಎಂದು ಯಾದವ್ ಆರೋಪಿಸಿದ್ದಾರೆ.ಹೆಚ್ಚಿನ ಸಂದರ್ಭದಲ್ಲ್ಲಿ ಹಳೆ ದೆಹಲಿ ಕಛೇರಿಯಿಂದ ಹಣವನ್ನು ಹಣ ಸಾಗಾಟ ನಡೆಯುತ್ತದೆ ಇನ್ನು ಜ್ಕೆಲವೊಮ್ಮೆ ಕೆಲವೊಮ್ಮೆ ವಡೋದರಾದಿಂದ ಸಾಗಿಸಲಾಗುತ್ತದೆ ಎಂದು ಯಾದವ್ ತಿಳಿಸಿದ್ದಾರೆ.
ಪಟೇಲ್ ಗೆ ಹಲವಾರು ಬಾರಿ ಫೋನ್ ಕರೆಗಳನ್ನು ಮಾಡಿದ್ದು ಟೆಕ್ಸ್ಟ್ ಮೆಸೇಜ್ ಗಳನ್ನು ಕಳಿಸಿದ್ದರೂ ಅವರು ಒಮ್ಮೆಯೂ ಉತ್ತರಿಸಿಲ್ಲ. ಖಾನ್ ಮಾರ್ಕೆಟ್ ನಲ್ಲಿ ತಮ್ಮ ಕಾರಿನ ಚಾಲಕನ ಮೂಲಕ ಪಟೇಲ್ ಅವರ ಮಗನಿಗೆ ಹಣ ವಿತರಣೆಯಾಗಿದೆ ಎಂದು ಯಾದವ್ ಯಾದವ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಅನೇಕ ಸಂದರ್ಭಗಳಲ್ಲಿ ಅವರು ಧವನ್ ಗೆ 5 ಲಕ್ಷ ರೂ.ನಿಂದ 20 ಲಕ್ಷದ ವರೆಗೆ ನಗದು ಹಣವನ್ನು ನೀಡಿದ್ದಾರೆಂದು ಅವರು ಆರೋಪಿಸಿದ್ದಾರೆ. ಸ್ಯಾಂಡೇಸರ್ ಗ್ರೂಪ್ ನ ಅಕ್ರಮ ಹಣ ವರ್ಗಾವಣೆಯಲ್ಲಿ ಪಾಲ್ಗೊಂಡ ಕಾರಣ ಧವನ್ ರನ್ನು ಕಳೇದ ತಿಂಗಳು ಜಾರಿ ನಿರ್ದೇಶನಾಲಯ ಬಂಧಿಸಿ ವಿಚಾರಣೆ ನಡೆಸಿತ್ತು.