ದೇಶ

ಮಸೂದೆಯಲ್ಲಿರುವ ಜೈಲು ಶಿಕ್ಷೆ ಪ್ರಸ್ತಾಪಕ್ಕೆ ನಮ್ಮ ಸಹಮತವಿಲ್ಲ

Raghavendra Adiga
ಬೆಂಗಳೂರು: "ಕಾಂಗ್ರೆಸ್ ಪಕ್ಷವು ತ್ರಿವಳಿ ತಲಾಕ್ ಮಸೂದೆಯಲ್ಲಿರುವ ಕೆಲ ಅಂಶಗಳನ್ನು ವಿರೋಧಿಸುತ್ತದೆ. ಅದರಲ್ಲಿ ಮುಖ್ಯವಾಗಿ ತ್ರಿವಳಿ ತಲಾಕ್ ಮಸೂದೆಯನುಸಾರ ಅಪರಾಧಿಗಳಿಗೆ ಜೈಲುವಾಸ ಶಿಕ್ಷೆಗೆ ಕಾಂಗ್ರೆಸ್ ಸಹಮತವಿಲ್ಲ. ತ್ರಿವಳಿ ತಲಾಖ್ ಮಸೂದೆಯಲ್ಲಿ ಸಾಕಷ್ಟು ನ್ಯೂನತೆಗಳು ಇವೆ, ಅದರಲ್ಲಿನ ಕೆಲವು ಅಂಶಗಳು ವಿವಾದವನ್ನು ಬಗೆಹರಿಸುವ ಬದಲಿಗೆ ಎರಡು ಕುಟುಂಬಗಳ ನಡುವೆ ದ್ವೇಷ ಹುಟ್ಟುಹಾಕುತ್ತದೆ. " ಬೆಂಗಳೂರಿನಲ್ಲಿ ಎ ಎನ್ ಐ ನ ಜತೆ ಮಾತನಾಡಿದ ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
"ತಲಾಕ್ ಮಸೂದೆಯನ್ನು ವಿರೋಧಿಸಿದ ವ್ಯಕ್ತಿಯನ್ನು ಜೈಲಿಗೆ ತಳ್ಳುವುದರಿಂದ ಆತನಿಗೆ ತನ್ನ ಪತ್ನಿಯ ಮೇಲೆ ದ್ವೇಷ ಬೆಳೆಯಬಹುದು. ಮತ್ತೆ ಆ ವ್ಯಕ್ತಿ ಅವಳನ್ನು ಸರಿಯಾಗಿ ನೋಡಿಕೊಲ್ಳದಿರಬಹುದು. ಹಾಗೆ ವ್ಯಕ್ತಿಯೊಬ್ಬನನ್ನು ಜೈಲಿಗೆ ಕಳಿಸುವ ಕಾರಣ ಆ ಕುಟುಂಬಕ್ಕೆ ಆರ್ಥಿಕವಾಗಿ ನಷ್ಟವಾಗಲಿದೆ.
"ಶೇ. 80 ರಷ್ಟು ಮುಸ್ಲಿಮರು ಕೆಳ ಮಧ್ಯಮ ವರ್ಗಕ್ಕೆ ಸೇರಿದವರಾಅಗಿದ್ದು ಅವರ ಬಡತನದ ಕಾರಣದಿಂದ ವ್ಯಕ್ತಿಯೊಬ್ಬನಿಗೆ ತನ್ನ ವೃದ್ದ ತಂದೆ ತಾಯಿ ಹಾಗೂ ಪತ್ನಿಯನ್ನು ನೋಡಿಕೊಳ್ಳುವುದು ಕಷ್ಟವಾಗಲಿದೆ. ಸರ್ಕಾರವು ಮಸೂದೆಯನ್ನು ಯಥಾವತ್ ರೀತಿಯಲ್ಲಿ ಹಾದುಹೋಗಲು ಪ್ರಯತ್ನಿಸುತ್ತಿರುವುದನ್ನು ನಾವು ವಿರೋಧಿಸುತ್ತಿದ್ದೇವೆ, ಮಸೂದೆಯನ್ನು ಮರುಪರಿಶೀಲನೆಗಾಗಿ ಕಳಿಸುವಂತೆ ನಾವು ಕೇಳಿದಾಗಳೂ ಸರ್ಕಾರ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಲೋಕಸಭೆಯಲ್ಲಿ ತ್ವರಿತವಾಗಿ ಅದನ್ನು ಪಾಸ್ ಮಾಡಲಾಗಿತ್ತು" ಖರ್ಗೆ ವಿವರಿಸಿದರು.
ಹಾಗಿದ್ದರೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ತ್ರಿವಳಿ ತಲಾಕ್ ಮಸೂದೆಯನ್ನು ವಿರೋಧಿಸುತ್ತದೆಯೆ ಎಂದು ಕೇಳಿದಾಗ ಖರ್ಗೆ ಸಮರ್ಪಕ ಉತ್ತರ ನೀಡಲಿಲ್ಲ. ಇತ್ತೀಚೆಗೆ ಲೋಕಸಭೆಯಲ್ಲಿ ಅಂಗೀಕಾರವಾದ ಮುಸ್ಲಿಂ ಮಹಿಳಾ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಮಸೂದೆ 2017 ಇದೀಗ ರಾಜ್ಯಸಭೆ ಅಂಗಳದಲ್ಲಿದೆ.
SCROLL FOR NEXT