ಮಹಿಳಾ ಪೊಲೀಸ್ ಪೇದೆ ಮತ್ತು ಶಾಸಕಿ ಆಶಾ ಕುಮಾರಿ
ಶಿಮ್ಲಾ: ಹಿಮಾಚಲ ಪ್ರದೇಶ ಪೊಲೀಸ್ ಪೇದೆ ಮತ್ತು ಸ್ಥಳೀಯ ಶಾಸಕಿ ಆಶಾ ಕುಮಾರಿ ನಡುವಿನ ಪರಸ್ಪರ ಕಪಾಳ ಮೋಕ್ಷ ಪ್ರಕರಣ ತಾರಕಕ್ಕೇರಿದ್ದು, ಇಬ್ಬರೂ ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಶಿಮ್ಲಾ ಪೊಲೀಸರು ಇಬ್ಬರ ವಿರುದ್ಧವೂ ದೂರು ದಾಖಲಿಸಿಕೊಂಡಿದ್ದು, ಶಾಸಕಿ ಆಶಾ ಕುಮಾರಿ ಹಾಗೂ ಮಹಿಳಾ ಪೊಲೀಸ್ ಪೇದೆ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕಿ ಆಶಾ ಕುಮಾರಿ ಅವರು, ಜನರ ನೂಕು ನುಗ್ಗಲು ನಡುವೆ ಆ ಮಹಿಳಾ ಪೊಲೀಸ್ ಪೇದೆ ಉದ್ದೇಶಪೂರ್ವಕವಾಗಿಯೇ ನನ್ನನ್ನು ತಳ್ಳಿದರು. ಅಲ್ಲದೆ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದರು. ನಾನು ನನ್ನ ಕರ್ತವ್ಯದಲ್ಲಿದ್ದಾಗ ಆಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಮಾತ್ರವಲ್ಲದೇ ನನನ್ನು ಥಳಿಸಿದ್ದಾರೆ ಹೀಗಾಗಿ ದೂರು ನೀಡಿದ್ದೇನೆ ಎಂದು ಆಶಾ ಕುಮಾರಿ ಹೇಳಿದ್ದಾರೆ.
ನಾನು ನನ್ನ ಕರ್ತವ್ಯ ಮಾಡಿದ್ದೇನೆ, ಆತ್ಮರಕ್ಷಣೆಗಾಗಿ ಆಕೆಯ ಮೇಲೆ ಕೈಮಾಡಿದೆ: ಪೊಲೀಸ್ ಪೇದೆ
ಅಲ್ಲಿ ಏನು ನಡೆಯಿತು ಎಂಬುದು ಇದೀಗ ಎಲ್ಲರಿಗೂ ತಿಳಿದಿದೆ. ನಾನು ನನ್ನ ಕರ್ತವ್ಯ ಮಾಡುತ್ತಿದ್ದೆಯ ಜನರನ್ನು ನಿಯಂತ್ರಿಸುತ್ತಿದ್ದಾಗ ಹಿಂಬದಿಯಲ್ಲಿದ್ದ ಮಹಿಳೆ ಏಕಾಏಕಿ ನನ್ನ ಮೇಲೆ ಮೂರು ಬಾರಿ ಕಾಪಾಳಕ್ಕೆ ಹೊಡೆದರು. ನನ್ನ ಆತ್ಮ ರಕ್ಷಣೆಗಾಗಿ ನಾನೂ ಹೊಡೆದೆ. ಆ ಸಂದರ್ಭದಲ್ಲಿ ಆಕೆ ಯಾರು ಎಂದು ನನಗೆ ತಿಳಿದಿರಲಿಲ್ಲ. ನನಗೆ ನನ್ನ ಕರ್ತವ್ಯವೇ ಮುಖ್ಯವಾಗಿತ್ತು. ಪ್ರಸ್ತುತ ನಾನು ಆಕೆಯ ವಿರುದ್ಧ ದೂರು ನೀಡಿದ್ದು, ನನಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಚುನಾವಣಾ ಸೋಲಿನ ಪರಮಾರ್ಶೆ ಸಭೆಯನ್ನು ನಡೆಸುತ್ತಿದ್ದರು. ಈ ವೇಳೆ ಹಲವು ಶಾಸಕರು ಹಾಗೂ ಪಕ್ಷದ ನಾಯಕರನ್ನು ಸಭೆಗೆ ಕರೆದಿದ್ದರು. ಆಶಾ ಕುಮಾರಿ ಕೂಡ ಸಭೆಗೆ ಹಾಜರಾಗುವ ಸಲುವಾಗಿ ಸ್ಥಳಕ್ಕೆ ತೆರಳಿದ್ದರು. ಆದರೆ, ಪೊಲೀಸರು ಸಭೆಯಲ್ಲಿ ಪಾಲ್ಗೊಳ್ಳಲು ಆಶಾ ಕುಮಾರಿಯವರಿಗೆ ಅವಕಾಶ ನೀಡಿಲ್ಲ. ಇದರಿಂದಾಗಿ ಕೆಂಡಾಮಂಡಲಗೊಂಡಿದ್ದ ಆಶಾ ಕುಮಾರಿಯವರು ಸ್ಥಳದಲ್ಲಿದ್ದ ಮಹಿಳಾ ಪೇದೆಯ ಕಪಾಳಕ್ಕೆ ಹೊಡೆದಿದ್ದರು. ಇದರ ಬೆನ್ನಲ್ಲೇ ಮಹಿಳಾ ಪೊಲೀಸ್ ಕೂಡ ತಿರುಗೇಟು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics