ಮುಂಬಯಿ: ಅಂಗವೈಕಲ್ಯತೆ ಹಾಗೂ ಹುಡುಗಿ ಕುರೂಪಿ ಆಗಿರುವುದು ವರದಕ್ಷಿಣೆ ಬೇಡಿಕೆಗೆ ಕಾರಣ ಎಂದು ಮಹಾರಾಷ್ಟ್ರದ 12 ನೇ ತರಗತಿ ಪಠ್ಯಪುಸ್ತಕದಲ್ಲಿ ನಮೂದಿಸಲಾಗಿದೆ.
12 ನೇ ತರಗತಿಯ ಸಮಾಜಶಾಸ್ತ್ರದ ಪಠ್ಯ ಪುಸ್ತಕದಲ್ಲಿ ಭಾರತದಲ್ಲಿ ಪ್ರಮು ಸಾಮಾಜಿಕ ಸಮಸ್ಯೆಗಳು ಎಂಬ ಶೀರ್ಷಿಕೆಯಡಿ ಈ ಈ ರೀತಿಯಾಗಿ ನಮೂದಿಸಲಾಗಿದೆ.ಹುಡುಗಿಯ ಕುರೂಪ ಮತ್ತು ಆಕೆಯ ಅಂಗವೈಕಲ್ಯತೆ ವರದಕ್ಷಿಣೆಗೆ ಕಾರಣ, ಹುಡುಗಿ ಕುರೂಪಿಯಾದಗಿದ್ದರೇ ಮತ್ತು ಅಂಗವಿಕಲೆ ಆಗಿದ್ದರೇ ಆಕೆಗೆ ಮದುವೆ ಆಗುವುದು ಕಷ್ಟ. ಇಂಥ ಹುಡುಗಿಯರನ್ನು ಮದುವೆಯಾಗಬೇಕಾದರೇ ಗಂಡಿನ ಕಡೆಯವರು ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಡುತ್ತಾರೆ. ಆಗ ಹುಡುಗಿಯ ಕಡೆಯವರು ಅಸಹಾಯಕರಾಗುತ್ತಾರೆ. ಇದು ವರದಕ್ಷಿಣೆಗೆ ಕಾರಣವಾಗುತ್ತದೆ ಎಂದು ಪಠ್ಯದಲ್ಲಿ ಮುದ್ರಿಸಲಾಗಿದೆ.
ವಿಷಯದ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಸಂಬಂಧ ಪಟ್ಟ ಮಂಡಳಿ ಜೊತೆ ಚರ್ಚಿಸಿದ್ದೇನೆ, 4 ವರ್ಷಗಳ ಹಿಂದೆ ಪಠ್ಯಪುಸ್ತಕ ಮುದ್ರಣವಾಗಿದ್ದು, ತಮಗೆ ಅದರ ಅರಿವಾಗಿಲ್ಲ ಎಂದು ಸೆಕೆಂಡರಿ ಸ್ಕೂಲ್ ಆಫ್ ಸರ್ಟಿಫಿಕೇಟ್ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. ಪುಸ್ತಕ ಮುದ್ರಣಗೊಂಡ ಅವಧಿಯಲ್ಲಿ ತಾವು ಅಧಿಕಾರದಲ್ಲಿ ಇರಲಿಲ್ಲ ಎಂದು ಅಧ್ಯಕ್ಷರು ವಿವರಣೆ ನೀಡಿದ್ದಾರೆ ಎಂದು ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತಾವ್ಡೆ ಹೇಳಿದ್ದಾರೆ.