ಸಂಗ್ರಹ ಚಿತ್ರ 
ದೇಶ

ಬೆಂಗಳೂರು ಬೆನ್ನಲ್ಲೇ ಚೆನ್ನೈನಲ್ಲೂ ಓಲಾ-ಉಬರ್ ಶೇರಿಂಗ್ ವ್ಯವಸ್ಥೆ ಮೇಲೆ ನಿಷೇಧ!

ಸುರಕ್ಷತಾ ಲೋಪದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಓಲಾ-ಉಬರ್ ನಲ್ಲಿನ ಶೇರಿಂಗ್ ವ್ಯವಸ್ಥೆಗೆ ನಿಷೇಧ ಹೇರಿರುವಂತೆಯೇ ಚೆನ್ನೈ ಮಹಾನಗರಿಯಲ್ಲೂ ಶೇರಿಂಗ್ ವ್ಯವಸ್ಥೆಗೆ ನಿಷೇಧ ಹೇರಲು ಚಿಂತನೆ ನಡೆಸಲಾಗುತ್ತಿದೆ.

ಚೆನ್ನೈ: ಸುರಕ್ಷತಾ ಲೋಪದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಓಲಾ-ಉಬರ್ ನಲ್ಲಿನ ಶೇರಿಂಗ್ ವ್ಯವಸ್ಥೆಗೆ ನಿಷೇಧ ಹೇರಿರುವಂತೆಯೇ ಚೆನ್ನೈ ಮಹಾನಗರಿಯಲ್ಲೂ ಶೇರಿಂಗ್ ವ್ಯವಸ್ಥೆಗೆ ನಿಷೇಧ ಹೇರಲು ಚಿಂತನೆ ನಡೆಸಲಾಗುತ್ತಿದೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಲ್ಲಿ ಕರ್ನಾಟಕದಲ್ಲಿ ಕ್ಯಾಬ್ ಶೇರಿಂಗ್ ವ್ಯವಸ್ಥೆಯನ್ನು ನಿಷೇಧಿಸಲಾಗಿತ್ತು. ಇದೇ ಮಾದರಿಯಲ್ಲೇ ತಮಿಳುನಾಡು ಸರ್ಕಾರ ಕೂಡ ಶೇರಿಂಗ್ ವ್ಯವಸ್ಥೆಯನ್ನು ನಿಷೇಧಿಸಲು ಚಿಂತನೆಯಲ್ಲಿ  ತೊಡಗಿದ್ದು, ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು 15 ಮಂದಿ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿದೆ. ಕ್ಯಾಬ್ ಸೇವೆ ಸುರಕ್ಷತೆ ಹಾಗೂ ಕ್ಯಾಬ್ ಸೇವೆಯ ಕುರಿತಂತೆ ಈ ಸಮಿತಿ ವರದಿ ನೀಡಲಿದ್ದು, ವರದಿಯನ್ನಾಧರಿಸಿ  ಸರ್ಕಾರ ಕಾರ್ ಪೂಲಿಂಗ್ ಸರ್ವಿಸ್ ಮೇಲೆ ನಿಷೇಧ ಹೇರುವ ಕುರಿತಂತೆ ನಿರ್ಣಯ ಕೈಗೊಳ್ಳಲ್ಲಿದೆ.

ಕಳೆದ ವರ್ಷದ ಫೆಭ್ರವರಿ ತಿಂಗಳಿನಲ್ಲಿ ಖ್ಯಾತ ಕ್ಯಾಬ್ ಸರ್ವಿಸ್ ಸಂಸ್ಥೆ ಓಲಾ ಮೊಟ್ಟ ಮೊದಲ ಬಾರಿಗೆ ಚೆನ್ನೈನಲ್ಲಿ ಶೇರಿಂಗ್ ಕ್ಯಾಬ್ ವ್ಯವಸ್ಥೆಯನ್ನು ಜಾರಿ ತಂದಿತ್ತು. ಇದರ ಬೆನ್ನಲ್ಲೇ ಉಳಿದ ಇತರೆ ಕ್ಯಾಬ್ ಸಂಸ್ಥೆಗಳೂ ಕೂಡ  ಪೂಲಿಂಗ್ ಸರ್ವಿಸ್ ಆರಂಭಿಸಿದ್ದವು. ಇಕೋ ಫ್ರೆಂಡ್ಲಿ ಹಾಗೂ ಕಡಿಮೆ ವೆಚ್ಚದ ಪ್ರಯಾಣ ಎಂದು ಹೇಳಿ ಸಂಸ್ಥೆಗಳ ಪ್ರಚಾರ ನಡೆಸಿದ್ದವು.

ತಮಿಳುನಾಡು ಮೋಟಾರ್ ವಾಹನ ಕಾಯ್ದೆ-1989 ಅಡಿಯಲ್ಲಿ ಮಿನಿ ಬಸ್, ಓಮ್ನಿ, ಆಟೋ ರಿಕ್ಷಾ ಮತ್ತು ಕ್ಯಾಬ್ ಗಳಿಗೆ ಮಾತ್ರ ಪೂಲಿಂಗ್ ಸರ್ವಿಸ್ ಒದಗಿಸುವ ಅವಕಾಶವಿದ್ದು, ಗುತ್ತಿಗೆಯಾಧಾರಿತ ವಾಹನಗಳು ಮಾರ್ಗ ಮಧ್ಯೆ  ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮತ್ತು ಇಳಿಸುವ ಅಧಿಕಾರ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಮತ್ತು  ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಚೆನ್ನೈನಲ್ಲಿ ಪೂಲಿಂಗ್ ಸರ್ವಿಸ್ ಕುರಿತಂತೆ ನಿರ್ಣಯ  ಕೈಗೊಳ್ಳಲು ಸಮಿತಿ ರಚನೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

SIR ಅಕ್ರಮ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ