ದೇಶ

ಎಸ್ಪಿ-ಕಾಂಗ್ರೆಸ್ ವಿರುದ್ಧ ಪ್ರಧಾನಿ ವಾಗ್ದಾಳಿ, ವಿಕಾಸ, ವಿದ್ಯುತ್, ಕಾನೂನಿಗೆ ಆದ್ಯತೆಯ ಭರವಸೆ

Lingaraj Badiger
ಅಲಿಗಢ: ಉತ್ತರ ಪ್ರದೇಶ ವಿಧಾಸಭೆ ಚುನಾವಣೆ ರಂಗೇರುತ್ತಿದ್ದು, ಭಾನುವಾರ ಅಲಿಗಢದಲ್ಲಿ ಬಿಜೆಪಿಯ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತರೂಢ ಸಮಾಜವಾದಿ ಪಕ್ಷ ಹಾಗೂ ಅದರ ಮಿತ್ರ ಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು
ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ನಾನು ಕಠಿಣ ಕಾನೂನು ಜಾರಿಗೆ ತರುತ್ತೇನೆ ಎಂಬ ಭಯದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಕೈಜೋಡಿಸಿದ್ದಾರೆ ಎಂದರು.
ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ವಿದ್ಯುತ್ ಇಲ್ಲದೆ ಇಲ್ಲಿನ ಎಷ್ಟೇ ಕೈಗಾರಿಕೆಗಳು ಬಂದ್ ಆಗುತ್ತಿವೆ. ಇಲ್ಲಿನ ಜನ ವಿದ್ಯುತ್ ಸರಬರಾಜು ನೋಡಿ ಸಂತೋಷ ಪಡುತ್ತಾರೆ. ಉತ್ತರ ಪ್ರದೇಶಕ್ಕೆ ಹಗರಣ ಬೇಕಿಲ್ಲ. ಕಮಲ ಬೇಕಿದೆ ಎಂದರು.
ಈ ರಾಜ್ಯದಲ್ಲಿ ಒಂದು ದಿನಕ್ಕೆ 7650 ಅಪರಾಧಗಳು,  24 ಅತ್ಯಾಚಾರಗಳು, 21 ಅತ್ಯಾಚಾರ ಯತ್ನ, 13 ಕೊಲೆ, 33 ಅಪಹರಣ, 19 ದರೋಡೆ ಮತ್ತು 136 ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದರು. ಅಲ್ಲದೆ ಅಲ್ಲದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕಠಿಣ ಕಾನೂನು, 24 ಗಂಟೆ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದರು.
SCROLL FOR NEXT