ಸಂಗ್ರಹ ಚಿತ್ರ 
ದೇಶ

ಇಸಿಸ್ ಸೇರಿದ 9 ಮಂದಿ ಭಾರತೀಯರು: ಎನ್ಐಎ ಮಾಹಿತಿ

ಭಾರತದ ವಿರುದ್ಧ ಉಗ್ರ ಸಂಘಟನೆಗಳು ಸತತವಾಗಿ ಪಿತೂರಿ ನಡೆಸುತ್ತಲೇ ಇದ್ದು, ತಮ್ಮ ಪಿತೂರಿಗಳಿಗೆ ಭಾರತೀಯರನ್ನು ಬಳಸಿಕೊಳ್ಳುವ ಇಸಿಸ್ ಯತ್ನ ಯಶಸ್ಸಾಗುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಭಾರತದ 9 ಮಂದಿ ಪ್ರಜೆಗಳು ಇಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆಂಬ...

ಹೈದರಾಬಾದ್: ಭಾರತದ ವಿರುದ್ಧ ಉಗ್ರ ಸಂಘಟನೆಗಳು ಸತತವಾಗಿ ಪಿತೂರಿ ನಡೆಸುತ್ತಲೇ ಇದ್ದು, ತಮ್ಮ ಪಿತೂರಿಗಳಿಗೆ ಭಾರತೀಯರನ್ನು ಬಳಸಿಕೊಳ್ಳುವ ಇಸಿಸ್ ಯತ್ನ ಯಶಸ್ಸಾಗುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಭಾರತದ 9 ಮಂದಿ ಪ್ರಜೆಗಳು ಇಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆಂಬ ಆಘಾತಕಾರಿ ಮಾಹಿತಿಯೊಂದನ್ನು ರಾಷ್ಟ್ರೀಯ ತನಿಖಾ ತಂಡ ಬಹಿರಂಗಪಡಿಸಿದೆ.

ತಮಿಳುನಾಡು ರಾಜ್ಯದ 8 ಮಂದಿ ಹಾಗೂ ತೆಲಂಗಾಣ ರಾಜ್ಯ ಮೂಲದ ಓರ್ವ ವ್ಯಕ್ತಿ 2016ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾಗೆ ಸೇರ್ಪಡೆಗೊಂಡಿದ್ದಾರೆಂದು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ತನಿಖಾದಳ ಅಧಿಕಾರಿಗಳು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ  ನಿಲ್ದಾಣದಲ್ಲಿ ಮೂವರು ಶಂಕಿತ ಇಸಿಸ್ ಉಗ್ರರನ್ನು ಬಂಧನಕ್ಕೊಳಪಡಿಸಿತ್ತು. ಬಂಧಿತರನ್ನು ಶೇಖ್ ಅಜರ್-ಅಲ್-ಇಸ್ಲಾಮ್ ಅಲಿಯಾಸ್ ಅಬ್ದುಲ್ ಸತ್ತಾರ್ ಶೇಖ್,ಮೊಹಮ್ಮದ್ ಫರಾನ್ ಅಲಿಯಾಸ್ ಮೊಹಮ್ಮದ್ ರಫೀಕ್ ಶೇಖ್ ಮತ್ತು ಅದ್ನಾನ್ ಹುಸೇನ್ ಅಲಿಯಾಸ್ ಮೊಹಮ್ಮದ್ ಹುಸೇನ್ ಎಂದು ಗುರ್ತಿಸಲಾಗಿತ್ತು.

ಬಂಧಿತ ಮೂವರು ಶಂಕಿತ ಉಗ್ರರು ಭಾರತ ವಿರುದ್ಧ ಪಿತೂರಿ ನಡೆಸುತ್ತಿದ್ದರು. ಭಾರತದಲ್ಲಿ ಇಸಿಸ್ ಪರ ಒಲವು ಹೊಂದಿರುವವರನ್ನು ಗುರ್ತಿಸುವುದು. ಅವರನ್ನು ಸಂಘಟನೆಗೆ ಸೆಲೆಯವುದು ಮತ್ತು ತರಬೇತಿ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಸಿಸ್ ಪರ ಕಾರ್ಯನಿರ್ವಹಿಸಲು ಮೂವರು ಭಾರತಕ್ಕೆ ಬಂದಿದ್ದರು.

ವಿಚಾರಣೆ ವೇಳೆ ಶಂಕಿತರು ಹಲವು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದು, ಈ ವರೆಗೂ 9 ಮಂದಿ ಭಾರತೀಯರು ಇಸಿಸ್ ಗೆ ಸೇರ್ಪಡೆಗೊಂಡಿದ್ದಾರೆಂದು ಹೇಳಿದ್ದಾರೆ. 30 ರ ವಯಸ್ಸಿನ ಅಂತರದಲ್ಲಿರುವ ತಮಿಳುನಾಡಿನ ಚೆನ್ನೈ ಮೂಲದ 8 ಮಂದಿ ಹಾಗೂ ತೆಲಂಗಾಣ ಮೂಲದ ಓರ್ವ ವ್ಯಕ್ತಿ ಹಾಗೂ ಇನ್ನಿತರೆ ವ್ಯಕ್ತಿಗಳು ಸಿರಿಯಾದ ಇಸಿಸ್ ಗೆ ಸೇರ್ಪಡೆಗೊಂಡಿದ್ದಾರೆಂದು ತಿಳಿಸಿದ್ದಾರೆ.

ದೇಶದಲ್ಲಿ ಉಗ್ರರ ತಂಡಗಳು ರಚನೆಗೊಂಡು ಬೆದರಿಕೆಗಳು ಹೆಚ್ಚಾಗುತ್ತಿದ್ದು, ಹಣವನ್ನು ಸಂಗ್ರಹಿಸಿ, ಉಗ್ರ ಸಂಘಟನೆಗಳ ಕ್ಯಾಂಪ್ ಗಳನ್ನು ನಡೆಸಿ, ಆ ಮೂಲಕ ಯುವಕರನ್ನು ನೇಮಕ ಮಾಡಿಕೊಂಡು, ತರಬೇತಿ ನೀಡಿ ಇಸಿಸ್ ಸೇರ್ಪಡೆಗೊಳ್ಳಲು ಸಿರಿಯಾಗೆ ಕಳುಹಿಸಲಾಗುತ್ತಿದೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣಗಳ ಸಂಬಂಧ ಎನ್ಐಎ ಗೃಹ ಸಚಿವಾಲಯದ ವ್ಯವಹಾರಗಳ ಅಡಿಯಲ್ಲಿ ಸೆಕ್ಷನ್ 120 ಬಿ (ಅಪರಾಧ ಪಿತೂರಿ), 17  (ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ನೆರವಿಗೆ ಶಿಕ್ಷೆ), 18 (ಪಿತೂರಿಗಳಿಗೆ ಶಿಕ್ಷೆ), 18 ಬಿ (ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರ ನೇಮಕಾತಿ), 20 (ಉಗ್ರ ಸಂಘಟನೆಗಳಲ್ಲಿ ಸದಸ್ಯತ್ವ ಸ್ಥಾನ), 38 (ಉಗ್ರರೊಂದಿಗೆ ಕೈಜೋಡಿಸುವಿಕೆ), 39 (ಉಗ್ರ ಸಂಘಟನೆಗಳಿಗೆ ಬೆಂಬಲ), 40 (ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ಪ್ರಕರಣಗಳನನ್ನು ದಾಖಲಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!