117 ವರ್ಷಗಳ ಕಾಲ ಜೀವಿಸಿದ್ದ ಕರ್ನಲ್ ನಿಜಾಮುದ್ದೀನ್ 
ದೇಶ

ಕರ್ನಲ್ ನಿಜಾಮುದ್ದೀನ್ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಲ ನೀಡಿದ್ದರು: ಪ್ರಧಾನಿ

ಹಿರಿಯ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಚಾಲಕರಾಗಿದ್ದ ಕರ್ನಲ್ ನಿಜಾಮುದ್ದೀನ್ ನಿನ್ನೆ...

ನವದೆಹಲಿ: ಹಿರಿಯ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಚಾಲಕರಾಗಿದ್ದ ಕರ್ನಲ್ ನಿಜಾಮುದ್ದೀನ್ ನಿನ್ನೆ ಮೃತಪಟ್ಟಿದ್ದು, ಅವರಿಗೆ 117 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. 
ನೇತಾಜಿಯವರ ಚಾಲಕರು, ಅವರ ತತ್ವ, ನಿಷ್ಠೆ, ಧೈರ್ಯ ಮತ್ತು ದೇಶಭಕ್ತಿಗೆ ಹೆಸರಾಗಿದ್ದು, ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಲ ನೀಡಿದ್ದಾರೆ ಎಂದರು.
ಇಂದು ಟ್ವೀಟ್ ಮಾಡಿರುವ ಪ್ರಧಾನಿ, ಸುಭಾಷ್ ಚಂದ್ರ ಬೋಸ್ ಅವರ ನಿಕಟವರ್ತಿ ಕರ್ನಲ್ ನಿಜಾಮುದ್ದೀನ್ ಅವರಿಗೆ ಗೌರವ ನಮನಗಳು. ಅವರ ಅಗಲಿಗೆ ನೋವುಂಟುಮಾಡುತ್ತಿದೆ ಎಂದು ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ 1943ರಿಂದ 1945ರವರೆಗೆ ಸೇವೆ ಸಲ್ಲಿಸಿದ್ದ ಕರ್ನಲ್ ನಿಜಾಮುದ್ದೀನ್ ದೀರ್ಘಕಾಲದ ಅಸೌಖ್ಯದಿಂದ ಉತ್ತರ ಪ್ರದೇಶದ ಅಜಮ್ ಗರ್ ನ ದಕ್ವಾ ಗ್ರಾಮದಲ್ಲಿ ನಿನ್ನೆ ನಿಧನ ಹೊಂದಿದರು. 1901ರಲ್ಲಿ ಹುಟ್ಟಿದ ನಿಜಾಮುದ್ದೀನ್ ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT