ದೇಶ

ಹಳೆಯ ನೋಟುಗಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧ: ಲೋಕಸಭೆಯಲ್ಲಿ ಮಸೂದೆಗೆ ಒಪ್ಪಿಗೆ

Sumana Upadhyaya
ನವದೆಹಲಿ: ಸರ್ಕಾರದ ನೋಟು ನಿಷೇಧ ತೀರ್ಮಾನವನ್ನು ಸಮರ್ಥಿಸಿಕೊಂಡ ಹಣಕಾಸು ಸಚಿವ ಅರುಣ್ ಜೇಟ್ಲಿ, ರೈತರು ಇದರಿಂದ ತೊಂದರೆ ಅನುಭವಿಸಿದ್ದಾರೆ ಎಂಬುದನ್ನು ಅಲ್ಲಗಳೆದಿದ್ದಾರೆ.
500 ಮತ್ತು 1000ದ 10ಕ್ಕಿಂತ ಹೆಚ್ಚು ನೋಟುಗಳನ್ನು ಹೊಂದಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗಿದ್ದು ಕನಿಷ್ಠ 10,000 ದಂಡ ವಿಧಿಸುವ ಕಾನೂನನ್ನು ಜಾರಿಗೆ ತರುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರ ಕುರಿತು ಅವರು ಮಾತನಾಡಿದರು.
ಕಪ್ಪು ಹಣವನ್ನು ತಡೆಯಲು ತಂದಿರುವ ನೋಟುಗಳ ಅಮಾನ್ಯತೆ ವಿಷಯದಲ್ಲಿ ರೈತರ ಸಾವಿನ್ನು ರಾಜಕೀಯ ಸಾಧನವನ್ನಾಗಿ ಬಳಸಿಕೊಳ್ಳಲು ವಿರೋಧ ಪಕ್ಷಗಳು ಪ್ರಯತ್ನಿಸಬೇಡಿ ಎಂದು ಹೇಳಿದರು.
ಕಳೆದ ಶುಕ್ರವಾರ ಜೇಟ್ಲಿಯವರು ನೋಟುಗಳ ಅಮಾನ್ಯತೆ-ನಿರ್ದಿಷ್ಟ ಬ್ಯಾಂಕ್ ನೋಟುಗಳ ಮಸೂದೆ-2017 ಬಗ್ಗೆ ಮಾತನಾಡಿದ ಅವರು, ನವೆಂಬರ್ 8ರ ನೋಟು ನಿಷೇಧ ವಿಶ್ವದ ಅತಿದೊಡ್ಡ ಕರೆನ್ಸಿ ಬದಲಾವಣೆ. ಅಂತಹ ತೀರ್ಮಾನ ತೆಗೆದುಕೊಳ್ಳಲು ಧೈರ್ಯ ಬೇಕು. ಹೀಗಾಗಿ ಕಳೆದ ಏಳು ದಶಕಗಳಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ನ್ನು ಟೀಕಿಸಿದರು.
ಈ ಮಸೂದೆ ಡಿಸೆಂಬರ್ 30ರಂದು ಹೊರಡಿಸಿರುವ ಸುಗ್ರೀವಾಜ್ಞೆ ವಿಧೇಯಕವನ್ನು ಬದಲಾಯಿಸಲಿದೆ. 
ನೋಟು ನಿಷೇಧದಿಂದ ರೈತರು ಮೃತಪಟ್ಟಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಬಿ ಬಿತ್ತನೆ ಶೇಕಡಾ 7ರಷ್ಟು ಏರಿಕೆಯಾಗಿದೆ ಎಂದರು.
SCROLL FOR NEXT