ಭಗವಂತ್ ಮಾನ್- ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನವದೆಹಲಿ: ಫೆ.07 ರಂದು ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಅವರ ಕಾಲೆಳೆದಿದ್ದಾರೆ.
ಚಾರ್ವಾಕ ಸಿದ್ಧಾಂತದ ಮನಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದ ಪ್ರಧಾನಿ ನರೆಂದ್ರ ಮೋದಿ, ಚಾರ್ವಾಕರು, ಮರಣಾ ನಂತರದ ಅಸ್ತಿತ್ವದಲ್ಲಿ ನಂಬಿ ಹೊಂದಿರಲಿಲ್ಲ. ಆದ್ದರಿಂದ ಜೀವಂತವಿರುವಾಗಲೇ ಮೋಜು ಮಾಡಿ, ಸಾಲ ಮಾಡಿ ತುಪ್ಪ ತಿನ್ನಿ ಎಂದು ಹೇಳುತ್ತಿದ್ದರು, ಅಂದಿನ ಜನರು ಸುಸಂಸ್ಕೃತರಾಗಿದ್ದರಿಂದ ಸಾಲ ಮಾಡಿ ತುಪ್ಪ ತಿನ್ನಿ ಎಂದಿದ್ದರು. ಆದರೆ ಆಮ್ ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಅವರೇನಾದರೂ ಬೋಧನೆ ಮಾಡಿದಿದ್ದರೆ ಸಾಲ ಮಾಡಿ ಕುಡಿಯಲು, ತಿನ್ನಲು ಬೇರೆಯದ್ದನ್ನೇ ಹೇಳುತ್ತಿದ್ದರು ಎಂದು ಮೋದಿ ಲಘು ಹಾಸ್ಯ ಧಾಟಿಯಲ್ಲಿ ಭಗವಂತ್ ಮಾನ್ ಅವರ ಕಾಲೆಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕೋಪಗೊಂಡ ಭಗವಂತ್ ಮಾನ್ ಮೋದಿ ತಮ್ಮ ವಿರುದ್ಧ ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ. ಪ್ರಧಾನಿ ಮೋದಿ ಭಾಷಣದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಭಗವಂತ್ ಮಾನ್, ಸಂಸತ್ ನಲ್ಲಿ ಪ್ರಧಾನಿಗಳ ಭಾಷಣ ಅವರಿಗೆ ಚುನಾವಣೆಯ ಭಯ ಇರುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿತ್ತು ಎಂದಿದ್ದಾರೆ.
ಸಂಸತ್ ನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿದ ವೇಳೆ ಟೀಕಾಕಾರರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದ ಮೋದಿ, ಹಲವು ವ್ಯಂಗ್ಯ ಹೇಳಿಕೆಗಳ ಮೂಲಕ ವಿರೋಧ ಪಕ್ಷವನ್ನು ಟೀಕಿಸಿದ್ದರು.