ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪಕ್ಷದಿಂದ ಕಿತ್ತುಹಾಕುವ ಹಕ್ಕು ಶಶಿಕಲಾಗಿಲ್ಲ: ಪನ್ನೀರ್ ಸೆಲ್ವಂ

ಪಕ್ಷದ ಖಜಾಂಚಿ ಸ್ಥಾನವನ್ನು 'ಅಮ್ಮ' ಜಯಲಲಿತಾ ಅವರು ಕೊಟ್ಟಿದ್ದು, ಆ ಸ್ಥಾನವನ್ನು ಕಿತ್ತುಹಾಕುವ ಹಕ್ಕು ಶಶಿಕಲಾ ಅವರಿಗಿಲ್ಲ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರು...

ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ
Manjula VN
Updated On : 8 Feb 2017, 9:50 am

ಚೆನ್ನೈ: ಪಕ್ಷದ ಖಜಾಂಚಿ ಸ್ಥಾನವನ್ನು 'ಅಮ್ಮ' ಜಯಲಲಿತಾ ಅವರು ಕೊಟ್ಟಿದ್ದು, ಆ ಸ್ಥಾನವನ್ನು ಕಿತ್ತುಹಾಕುವ ಹಕ್ಕು ಶಶಿಕಲಾ ಅವರಿಗಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರು ಬುಧವಾರ ಹೇಳಿದ್ದಾರೆ.

ಪನ್ನೀರ್ ಸೆಲ್ವಂ ಅವರು ಜಯಲಲಿತಾ ಅವರ ಆಪ್ತೆ ವಿಕೆ. ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಬೆನ್ನಲ್ಲೇ ಎಐಎಡಿಎಂಕೆ ಪಕ್ಷದಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ಕಂಡು ಬಂದಿದ್ದು, ಶಶಿಕಲಾ ಅವರು ತಡರಾತ್ರಿ ಪಕ್ಷದ ಖಜಾಂಚಿ ಸ್ಥಾನದಿಂದ ಸೆಲ್ವಂ ಅವರನ್ನು ಕಿತ್ತುಹಾಕಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸೆಲ್ವಂ ಅವರು, ಪಕ್ಷದ ಖಜಾಂಚಿ ಸ್ಥಾನವನ್ನು ಜಯಲಲಿತಾ ಅವರು ನೀಡಿದ್ದು, ಸ್ಥಾನದಿಂದ ಕಿತ್ತು ಹಾಕುವ ಹಕ್ಕು ಶಶಿಕಲಾ ಅವರಿಗಿಲ್ಲ. ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯದ ಜನತೆಯ ಇಚ್ಛೆಗಳಂತೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಶಶಿಕಲಾ ಅವರ ನಿರ್ಧಾರದ ಹಿಂದೆ ಎಐಎಡಿಎಂಕೆ ಇದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ.

10 ವರ್ಷಗಳ ಹಿಂದೆ ಪಕ್ಷದ ಖಜಾಂಚಿ ಸ್ಥಾನವನ್ನು 'ಅಮ್ಮ' ಜಯಲಲಿತಾ ಅವರು ನೀಡಿದ್ದರು. ಅಮ್ಮ ನೀಡಿದ್ದ ಜವಾಬ್ದಾರಿಯನ್ನು ನಾನು ಪೂರ್ಣಗೊಳಿಸಿದ್ದೇನೆ. ಇದರಿಂದ ಅಮ್ಮ ಸಂತೃಪ್ತಿಗೊಂಡಿದ್ದಾರೆ. ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಯಾವುದಕ್ಕೂ ನಾನು ಹೆದರುವುದಿಲ್ಲ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆಂದು ತಿಳಿಸಿದ್ದಾರೆ.

ಹೊಸ ಪಕ್ಷ ಕಟ್ಟುವಿರೇ ಎಂಬ ಪ್ರಶ್ನೆಗೆ ಉತ್ತರಿಸುವ ಅವರು, ಈ ಪ್ರಶ್ನೆಗೆ ಉತ್ತರವನ್ನು ಕಾದುನೋಡಬೇಕಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments