ದೇಶ

ಇಸಿಸ್ ಉಗ್ರಗಾಮಿಗಳ 'ಹಿಟ್'ಲಿಸ್ಟ್'ನಲ್ಲಿ ಭಾರತದ 150 ಟೆಕ್ಕಿಗಳು

Manjula VN

ನವದೆಹಲಿ: ಇಸಿಸ್ ಉಗ್ರ ಸಂಘಟನೆಯ ಸದಸ್ಯರ ಕುರಿತಂತೆ ವಿವರಗಳನ್ನು ಭದ್ರತಾ ಪಡೆಗಳಿಗೆ ಒಗಿಸುತ್ತಿದ್ದ ಸದುದ್ದೇಶಿತ ಹ್ಯಾಕರ್ ಗಳು ಹಾಗೂ ಕಂಪ್ಯೂಟರ್ ವೃತ್ತಿಪರರನ್ನು ಹತ್ಯೆ ಮಾಡಲು ಉಗ್ರರು ಸಂಚು ರೂಪಿಸಿದ್ದು, ಇದಕ್ಕಾಗಿ 'ಕಿಲ್ ಲಿಸ್ಟ್' (ಹತ್ಯೆಪಟ್ಟಿ)ಯೊಂದನ್ನು ಸಿದ್ಧಪಡಿಸಿದ್ದಾರೆಂಬ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಇಸಿಸ್ ಉಗ್ರರು ಸಿದ್ಧಪಡಿಸಿದ್ದ ಪಟ್ಟಿ ಇದೀಗ ರಾಷ್ಟ್ರೀಯ ತನಿಖಾ ದಳಕ್ಕೆ ಲಭ್ಯವಾಗಿದ್ದು, ವಿಶ್ವದ ವಿವಿಧೆಡೆಯ ಕಂಪ್ಯೂಟರ್ ವೃತ್ತಿಪರರ ಹೆಸರುಗಳು ಹಾಗೂ ವಿಳಾಸಗಳು ಪಟ್ಟಿಯಲ್ಲಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ಉಗ್ರರ ಕಿಲ್ ಲಿಸ್ಟ್ ನಲ್ಲಿ 150 ಮಂದಿ ಮಹಾರಾಷ್ಟ್ರದವರೇ ಇದ್ದು, ಪ್ರಮುಖವಾಗಿ 70 ಮುಂದಿ ಮುಂಬೈನವರಾಗಿದ್ದಾರೆಂದು ತಿಳಿಸಿದೆ. ಈಗಾಗಲೇ ಪಟ್ಟಿಯನ್ನು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು, ಪಟ್ಟಿಯಲ್ಲಿ ಹೆಸರು ಹೊಂದಿರುವ ಕೆಲವು ವ್ಯಕ್ತಿಗಳನ್ನು ಸಂಪರ್ಕಿಸಿ ಮಾತುಕತೆ ನಡೆಸಿದೆ ಎಂದು ತಿಳಿದುಬಂದಿದೆ.

 ಇಸಿಸ್ ಸಂಘಟನೆಗೆ ಉಗ್ರರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ನಾಸಿರ್ ಬಿನ್ ಯಾಫಿ ಚೌನ್ ಎಂಬ ಮಹಾರಾಷ್ಟ್ರದ ಯುವಕನ ಲ್ಯಾಪ್ ಟಾಪ್ ನಲ್ಲಿ ಈ ಹತ್ಯಾ ಪಟ್ಟಿ ಪತ್ತೆಯಾಗಿದೆ ಎನ್ನಲಾಗಿದೆ. ಸಿರಿಯಾ ಮೂಲದ ನಿಯಂತ್ರಕ ಶಫಿ ಅರ್ಮಾರ್ ಎಂಬಾತ ಈತನಿಗೆ ಈ ಪಟ್ಟಿಯನ್ನು ರವಾನಿಸಿದ್ದ ಎಂದು ಹೇಳಲಾಗುತ್ತಿದೆ. ಪಟ್ಟಿಯಲ್ಲಿ ಭದ್ರತಾ ಪಡೆಗಳಿಗೆ ನೆರವಾಗುತ್ತಿದ್ದ ಕಂಪ್ಯೂಟರ್ ತಜ್ಞರ ಹೆಸರು, ಹುದ್ದೆ, ಕಂಪನಿ ಮತ್ತು ಇ-ಮೇಲ್ ವಿಳಾಸ ಕೂಡ ಪಟ್ಟಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT