ನೋಯ್ಡಾ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನ ಮೈತ್ರಿಯ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವ್ಯಂಗ್ಯವಾಡಿದ್ದು, ಮೈನಸ್ ಗೆ ಮೈನಸ್ ನ್ನು ಕೂಡಿದರೆ ಫಲಿತಾಂಶವೂ ಮೈನಸ್ ಎಂದಿದ್ದಾರೆ.
ನೋಯ್ಡಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ರಾಜನಾಥ್ ಸಿಂಗ್, ಎಸ್ ಪಿ-ಕಾಂಗ್ರೆಸ್ ಮೈತ್ರಿಯನ್ನು ಮೈನಸ್+ಮೈನಸ್= ಮೈನಸ್ ಸಮೀಕರಣಕ್ಕೆ ಹೋಲಿಸಿದ್ದು, ಬಿಎಸ್ ಪಿ ತಾನು ಈಗಾಗಲೇ ಸೋಲೊಪ್ಪಿಕೊಂಡಿರುವ ಯುದ್ಧದಲ್ಲಿ ಸೆಣೆಸುತ್ತಿದೆ ಎಂದಿದ್ದಾರೆ. ಜಾಟ್ ಸಮುದಾಯದವರು ಬಿಜೆಪಿಗೆ ಬೆಮ್ಬಲ ನೀಡಲಿದ್ದಾರೆ, ನಾನು ಜಾಟ್ ಸಮುದಾಯದವರಿರುವ ಪ್ರದೇಶದಲ್ಲಿ ಹೆಚ್ಚು ಪ್ರವಾಸ ಮಾಡಿದ್ದೇನೆ, ಅಲ್ಲಿನ ಜನತೆ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದ್ದು ಫೆ.11 ರಂದು ಮೊದಲ ಹಂತದ ಮತದಾನ ಪ್ರಾರಂಭವಾಗಲಿದ್ದು 73 ವಿಧಾನಸಭಾ ಕ್ಷೇತ್ರಗಳಿಗೆ ಬೆಳಿಗ್ಗೆ 7 ರಿಂದ ಮತದಾನ ನಡೆಯಲಿದೆ.