'ವೋ ಮನ್ ಕಿ ಬಾತ್ ಕರ್ತೆ ಹೇ, ಹಮ್ ಕಾಮ್ ಕೀ ಬಾತ್ ಕರ್ತೆ ಹೇ': ಮೋದಿಗೆ ಅಖಿಲೇಶ್ ತಿರುಗೇಟು
ವೋ ಮನ್ ಕಿ ಬಾತ್ ಕರ್ತೆ ಹೇ, ಹಮ್ ಕಾಮ್ ಕೀ ಬಾತ್ ಕರ್ತೆ ಹೇ...'ಮನ್ ಕಿ ಬಾತ್' ನಡೆಸುವ ಜನರೆಂದರೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್...
ಲಖನೌ: ವೋ ಮನ್ ಕಿ ಬಾತ್ ಕರ್ತೆ ಹೇ, ಹಮ್ ಕಾಮ್ ಕೀ ಬಾತ್ ಕರ್ತೆ ಹೇ...'ಮನ್ ಕಿ ಬಾತ್' ನಡೆಸುವ ಜನರೆಂದರೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶುಕ್ರವಾರ ಹೇಳಿದ್ದಾರೆ.
ಉತ್ತರಪ್ರದೇಶ ಚುನಾವಣೆ ಹಿನ್ನಲೆಯಲ್ಲಿ ಪಿಲಿಭಿಟ್ ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾಡಿದ್ದಾರೆ.
'ವೋ ಮನ್ ಕಿ ಬಾತ್ ಕರ್ತೆ ಹೇ, ಹಮ್ ಕಾಮ್ ಕೀ ಬಾತ್ ಕರ್ತೆ ಹೇ' (ಅವರು ಮನದಾಳದ ಮಾತಿನ ಕುರಿತು ಮಾತನಾಡುತ್ತಾರೆ, ನಾವು ಕೆಲಸ ಕುರಿತು ಮಾತನಾಡುತ್ತೇವೆ), ಮನದಾಳದ ಮಾತುಗಳನ್ನು ಆಡುವ ಜನರ ಮನಸ್ಸು ಚಂಚಲದಿಂದ ಇರುತ್ತದೆ ಎಂದು ನಮಗೆ ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ. ಹೀಗಾಗಿ 'ಮನ್ ಕಿ ಬಾತ್' ನಡೆಸುವ ಜನರೆಂದರೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇವಲ ಭರವಸೆಗಳನ್ನಷ್ಟೇ ನೀಡುತ್ತಿದ್ದು, ತಾವು ನೀಡಿದ್ದ ಭರವಸೆಗಳನ್ನು ಎಂದಿಗೂ ಈಡೇರಿಸಿಲ್ಲ. ಸಮಾಜವಾದಿ ಪಕ್ಷದ ಮನದಿಂದಲ್ಲ, ಹೃದಯದಿಂದ ಮಾತನಾಡುತ್ತದೆ ಎಂದು ತಿಳಿಸಿದ್ದಾರೆ.