ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಫೆ.11 ರಂದು ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, 73 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಪ್ರಮುಖ ವಿಧಾನಸಭಾ ಕ್ಷೇತ್ರಗಲ್ಲಿ ಬೆಳಿಗ್ಗೆ 9 ಗಂಟೆ ವರೆಗಿನ ಮತದಾನ ಪ್ರಮಾಣದ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಅಲೀಘರ್ ವಿಧಾನಸಭಾ ಕ್ಷೇತ್ರದಲ್ಲಿ ಶೇ.10.5 ರಷ್ಟು ಮತದಾನ, ಬುಲಂದ್ ಶಹರ್ ನಲ್ಲಿ ಶೇ.12 ರಷ್ಟು ಮತದಾನ ನಡೆದಿದ್ದರೆ, ಮುಜಾಫರ್ ನಗರದಲ್ಲಿ ಶೇ.15 ರಷ್ಟು ಮತದಾನ ನಡೆದಿದೆ.