ಜಮ್ಮು: ಗಡಿಯಲ್ಲಿ ಪಾಕಿಸ್ತಾನ ಮತ್ತೆ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ರಜೌರಿ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನಾ ಕ್ಯಾಂಪ್ ಗಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ದಾಳಿ ನಡೆಸುತ್ತಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ.
ನಿನ್ನೆ ಸಂಜೆಯಿಂದಲೂ ಪಾಕಿಸ್ತಾನ ಸೇನೆ ಭಾರತೀಯ ಸೇನಾ ಕ್ಯಾಂಪ್ ಗಳನ್ನು ಗುರಿಯಾಗಿರಿಸಿಕೊಂಡು ಮಾರ್ಟರ್ ಶೆಲ್, ಆಟೋಮೆಟಿಕ್ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಪಾಕಿಸ್ತಾನ ಸೇನೆ ಸಣ್ಣ ಮಟ್ಟದ ಶಸ್ತ್ರಾಸ್ತ್ರಗಳು ಹಾಗೂ ಆಟೋಮೆಟಿಕ್ ಶಸ್ತ್ರಾಗಳು, ಮಾರ್ಟರ್ ಶೆ ಗಳನ್ನು ಬಳಸಿ ಸುಂದರ್ ಬನಿಯ ಗಡಿ ನಿಯಂತ್ರಣ ರೇಖೆ 1805 ಸೆಕ್ಟರ್ ಬಳಿ ದಾಳಿ ನಡೆಸುತ್ತಲಿದೆ. ಪಾಕಿಸ್ತಾನ ಸೇನೆಯ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಹೇಳಿದ್ದಾರೆ.