ಸಾಂದರ್ಭಿಕ ಚಿತ್ರ 
ದೇಶ

ಛತ್ತೀಸ್ ಗಢದಲ್ಲಿ ನಕ್ಸಲರಿಂದ ಇಬ್ಬರು ಎಸ್ ಟಿಎಫ್ ಸಿಬ್ಬಂದಿ ಹತ್ಯೆ

ಛತ್ತೀಸಗಢದ ಕೊಂಡಗಾಂವ ಜಿಲ್ಲೆಯಲ್ಲಿ ಬುಧವಾರ ನಕ್ಸಲರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ವಿಶೇಷ ಕಾರ್ಯಪಡೆ(ಎಸ್ ಟಿಎಫ್)ಯ...

ರಾಯ್ ಪುರ: ಛತ್ತೀಸಗಢದ ಕೊಂಡಗಾಂವ ಜಿಲ್ಲೆಯಲ್ಲಿ ಬುಧವಾರ ನಕ್ಸಲರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ವಿಶೇಷ ಕಾರ್ಯಪಡೆ(ಎಸ್ ಟಿಎಫ್)ಯ ಇಬ್ಬರು ಯೋಧರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರ್ದ್ ಪಾಲ್ ಪೊಲೀಸ್ ಠಾಣ ವ್ಯಾಪ್ತಿಯ ತುಮ್ದಿವಾಲ್ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಸ್ ಟಿಎಫ್ ನ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವಿಶೇಷ ಪೊಲೀಸ್ ಮಹಾ ನಿರ್ದೇಶಕ ಡಿಎಂ ಅವಸ್ಥಿ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಎಸ್ ಟಿಎಫ್ ಹಾಗೂ ಪೊಲೀಸರು ಜಂಟಿಯಾಗಿ ಮರ್ದ್ ಪಾಲ್ ಸಮೀಪ ನಕ್ಸಲರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ನಕ್ಸಲರ ಗುಂಪೊಂದು ಪೊಲೀಸರ ಹಾಗೂ ಎಸ್ ಟಿಎಫ್ ಪಡೆ ಮೇಲೆ ಭಾರಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎಸ್ ಟಿಎಫ್ ನ ಸಹಾಯಕ ಕಮಾಂಡರ್ ಹಾಗೂ ಪೇದೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅವಸ್ಥಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು