ದೇಶ

ಡೊನಾಲ್ಡ್ ಟ್ರಂಪ್ ಇಂಗ್ಲೆಂಡ್ ಪ್ರವೇಶಿಸದಂತೆ ಆನ್ ಲೈನ್ ಕೋರಿಕೆಯನ್ನು ತಿರಸ್ಕರಿಸಿದ ಸರ್ಕಾರ

Sumana Upadhyaya
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯನ್ನು ರದ್ದುಪಡಿಸುವ ಅಥವಾ ನಿರಾಕರಿಸುವ ಕರೆ ನೀಡಿರುವ ಆನ್ ಲೈನ್ ಕೋರಿಕೆಯನ್ನು ಬ್ರಿಟನ್ ಸರ್ಕಾರ ನಿನ್ನೆ ಅಧಿಕೃತವಾಗಿ ತಿರಸ್ಕರಿಸಿದೆ.
ಡೊನಾಲ್ಡ್ ಟ್ರಂಪ್  ಇಂಗ್ಲೆಂಡ್ ಪ್ರವೇಶಿಸುವುದನ್ನು ತಡೆಯಿರಿ ಎಂದು ಸುಮಾರು 20 ಲಕ್ಷ ಮಂದಿ ಸಹಿ ಹಾಕಿ ಸರ್ಕಾರಕ್ಕೆ ಕಳುಹಿಸಿದ್ದರು. ಡೊನಾಲ್ಡ್ ಅವರ ಭೇಟಿ ರಾಣಿ ಎಲಿಜಬೆತ್ ಅವರಿಗೆ ಮುಜುಗರವನ್ನುಂಟುಮಾಡಲಿದೆ ಎಂದು ಆನ್ ಲೈನ್ ಕೋರಿಕೆಯನ್ನು ತಯಾರು ಮಾಡಿದವರು ಹೇಳಿದ್ದರು.
ಸಹಿಯ ವೆಬ್ ಪುಟದಲ್ಲಿ ಇಂಗ್ಲೆಂಡಿನ ವಿದೇಶಾಂಗ ಮತ್ತು ಕಾಮನ್ ವೆಲ್ತ್ ಕಚೇರಿ ನೀಡಿರುವ ಹೇಳಿಕೆಯಂತೆ, ಕೆಲವರು ಸಹಿ ಹಾಕಿ ಕಳುಹಿಸಿರುವ ಕೋರಿಕೆಯನ್ನು ಗಮನಿಸಲಾಗಿದೆ. ಆದರೆ ಅದನ್ನು ಬೆಂಬಲಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಕಳೆದ ತಿಂಗಳು ವಾಷಿಂಗ್ಟನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬ್ರಿಟನ್ ಪ್ರಧಾನಿ ತೆರೆಸಾ ಮೆ ಆಹ್ವಾನ ನೀಡಿದ್ದು, ಎರಡೂ ರಾಷ್ಟ್ರಗಳ ನಡುವಿನ ಸಂಬಂಧದ ಅಗತ್ಯವನ್ನು ಸಾರುತ್ತದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಟ್ರಂಪ್ ಅವರು ಇಂಗ್ಲೆಂಡಿಗೆ ಭೇಟಿ ನೀಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಇದೇ 20ರಂದು ಸಂಸದೀಯ ಚರ್ಚೆ ಅಲ್ಲಿ ನಡೆಯಲಿದ್ದು ಮತದ ಜನಪ್ರಿಯತೆಯನ್ನು ಸಾರುತ್ತದೆ.
SCROLL FOR NEXT