ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಆದಾಯ ತೆರಿಗೆ ಇಲಾಖೆ ಸುಮಾರು 18 ಲಕ್ಷ ಜನರ ಶಂಕಿತ ಬ್ಯಾಂಕ್ ಠೇವಣಿಯನ್ನು ಪರಿಶೀಲಿಸಿದ್ದು, ಈ ಪೈಕಿ ಅರ್ಧದಷ್ಟು ಜನರ ಖಾತೆಗಳನ್ನು ಅನುಮಾನಾಸ್ಪದ ಪಟ್ಟಿಗೆ ಸೇರಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ನಡೆಸಿದ 'ಆಪರೇಷನ್ ಕ್ಲೀನ್ ಮನಿ'ಯಡಿ, ಗರಿಷ್ಠ ಮೌಲ್ಯದ ನೋಟ್ ನಿಷೇಧಿಸಿದ ನಂತರದ 50 ದಿನಗಳಲ್ಲಿ ತಮ್ಮ ಬ್ಯಾಂಕ್ ಖಾತೆಗೆ 5 ಲಕ್ಷಕ್ಕಿಂತ ಹೆಚ್ಚು ಹಣ ಜಮೆ ಮಾಡಿದ ಶಂಕಿತರಿಗೆ ಇ-ಮೇಲ್, ಎಸ್ಎಂಎಸ್ ಮೂಲಕ ಸುಮಾರು 18 ಲಕ್ಷ ಮಂದಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ತಾವು ಜಮೆ ಮಾಡಿದ ಶಂಕಿತ ಹಣದ ಬಗ್ಗೆ ಫೆ.15ರೊಳಗೆ ಉತ್ತರಿಸುವಂತೆ ಸೂಚಿಸಲಾಗಿತ್ತು.
ಸರ್ಕಾರದ ಮೂಲಗಳ ಪ್ರಕಾರ, ನೋಟಿಸ್ ಗೆ ಇದುವರೆಗೂ ಪ್ರತಿಕ್ರಿಯೆ ನೀಡದವರು ತಮ್ಮ ಹಣಕ್ಕೆ ಸೂಕ್ತ ಕಾನೂನಿನ ವಿವರಣೆ ನೀಡಬೇಕಾಗುತ್ತದೆ. ಒಂದು ಸೂಕ್ತ ವಿವರಣೆ ನೀಡದಿದ್ದರೆ ಆ ಹಣವನ್ನು ಕಪ್ಪು ಹಣ ಎಂದು ಘೋಷಿಸಿ 2016-17ರ ಹೊಸ ತೆರಿಗೆ ಕಾನೂನಿನಡಿ ಅವರ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಈ ಮಧ್ಯೆ, ಎಎಂಎಸ್ ಮತ್ತು ಇ-ಮೇಲ್ ನೋಟಿಸ್ ಗೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಹೀಗಾಗಿ ಆದಾಯ ತೆರಿಗೆ ಇಲಾಖೆ ಅನುಮಾನಾಸ್ಪದ ಖಾತೆದಾರರಿಗೆ ಅಧಿಕೃತವಾಗಿ ನೋಟಿಸ್ ನೀಡಿ ಮಾರ್ಚ್ 31ರವರೆಗೆ ನೂತನ ತೆರಿಗೆ ಯೋಜನೆ ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಯೋಜನೆ(ಪಿಎಂಜಿಕೆವೈ) ಅಂತ್ಯವಾಗುವವರೆ ಕಾಯಲು ನಿರ್ಧರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಪಿಎಂಜಿಕೈವೈ ಯೋಜನೆಯಡಿ ಜನರು ತಮ್ಮ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಕೇಂದ್ರ ಸರ್ಕಾರ ಮಾರ್ಚ್ 31ರ ವರೆಗೆ ಅವಕಾಶ ನೀಡಿದೆ. ಈ ಯೋಜನೆಯಲ್ಲಿ ಶೇ.50ರಷ್ಟು ತೆರಿಗೆ, ದಂಡ ಹಾಗೂ ಸರ್ಚಾರ್ಜ್ ಕಟ್ಟಬೇಕಾಗಿದೆ.
ಆದಾಯ ತೆರಿಗೆ ಇಲಾಖೆ ಎಸ್ಎಂಎಸ್ ಕಳುಹಿಸಿದ 18 ಲಕ್ಷ ಜನರ ಪೈಕಿ 9 ಲಕ್ಷ ಖಾತೆಗಳನ್ನು ಅನುಮಾನಾಸ್ಪದ ಪಟ್ಟಿಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics