ದೇಶ

ಮಣಿಪುರದ ತೌಬಾಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಇರೋಮ್‌ ಶರ್ಮಿಳಾ

Lingaraj Badiger
ಇಂಫಾಲ್: ಐರನ್ ಲೇಡಿ ಇರೋಮ್‌ ಶರ್ಮಿಳಾ ಅವರು ಮಣಿಪುರ ವಿಧಾನಸಭೆ ಚುನಾವಣೆಗೆ ತೌಬಾಲ್ ಕ್ಷೇತ್ರದಿಂದ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತೌಬಾಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮಣಿಪುರದ ಮುಖ್ಯಮಂತ್ರಿ ಒಕ್ರಮ್‌ ಇಬೋಬಿ ವಿರುದ್ಧ ಶರ್ಮಿಳಾ ಕಣಕ್ಕಿಳಿದಿದ್ದಾರೆ. ಕಳೆದ ಮೂರು ಅವಧಿಗೆ ಮಣಿಪುರದ ಮುಖ್ಯಮಂತ್ರಿಯಾಗಿರುವ ಇಬೋಬಿ ವಿರುದ್ಧ ರಾಜಕೀಯದಲ್ಲಿ ಅನನುಭವಿಯಾಗಿರುವ ಶರ್ಮಿಳಾ ಸ್ಪರ್ಧಿಸಲಿರುವುದು ತೀವ್ರ ಕುತೂಹಲ ಮೂಡಿಸಿದೆ.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಿಳಾ, ನಾನು ಮುಖ್ಯಮಂತ್ರಿಯಾಗಬೇಕು. ಹೀಗಾಗಿಯೇ ಮುಖ್ಯಮಂತ್ರಿಯ ವಿರುದ್ಧವೇ ಸ್ಪರ್ಧಿಸಿದ್ದೇನೆ. ನಾನು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹಾಗೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದ ಶರ್ಮಿಳಾ ಕಳೆದ ಆಗಸ್ಟ್‌ನಲ್ಲಿ, ಪ್ರತಿಭಟನೆಯನ್ನು ಕೈಬಿಟ್ಟಿದ್ದರು. ಅಕ್ಟೋಬರ್‌ ತಿಂಗಳಲ್ಲಿ ಪೀಪಲ್ಸ್‌ ರೀಸರ್ಜೆನ್ಸ್‌್ ಆ್ಯಂಡ್‌ ಜಸ್ಟೀಸ್‌ ಅಲಯನ್ಸ್‌್ (ಪಿಆರ್‌ಜೆಎ) ಪಕ್ಷ ಸ್ಥಾಪಿಸಿ, ತೌಬಾಲ್‌ ನಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
SCROLL FOR NEXT