ನಾಮಪತ್ರ ಸಲ್ಲಿಸಿದ ಇರೊಮ್ ಶರ್ಮಿಳಾ 
ದೇಶ

ಮಣಿಪುರ ಚುನಾವಣೆ: ತೌಬಲ್ ಕ್ಷೇತ್ರದಿಂದ ಉಕ್ಕಿನ ಮಹಿಳೆ ಇರೊಮ್ ಶರ್ಮಿಳಾ ನಾಮಪತ್ರ ಸಲ್ಲಿಕೆ

ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ತೌಬಲ್ ವಿಧಾನಸಭಾ ಕ್ಷೇತ್ರದಿಂದ ಉಕ್ಕಿನ ಮಹಿಳೆ ಎಂದೇ ಖ್ಯಾತಿ...

ಇಂಫಾಲ್:ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ತೌಬಲ್ ವಿಧಾನಸಭಾ ಕ್ಷೇತ್ರದಿಂದ ಉಕ್ಕಿನ ಮಹಿಳೆ ಎಂದೇ ಖ್ಯಾತಿ ಗಳಿಸಿದ ಇರೋಮ್ ಶರ್ಮಿಳಾ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಪೀಪಲ್ಸ್ ರಿಸರ್ಜೆನ್ಸ್ ಅಂಡ್ ಜಸ್ಟೀಸ್ ಅಲಯನ್ಸ್ ಪಕ್ಷದ ಪರವಾಗಿ ಶರ್ಮಿಳಾ ನಾಮಪತ್ರ ಸಲ್ಲಿಸಿದರು.ಇಂಫಾಲ್ ನಿಂದ 20 ಕಿಲೋ ಮೀಟರ್ ದೂರ ಸೈಕಲ್ ನಲ್ಲಿ ತೆರಳಿ ಶರ್ಮಿಳಾ ನಾಮಪತ್ರ ಸಲ್ಲಿಸಿದ್ದಾರೆ.
 ಎಫ್ ಎಸ್ ಪಿಎ ವಿರೋಧಿ(ಸೇನಾ ಪಡೆಯ ವಿಶೇಷ ಹಕ್ಕುಗಳ ಕಾಯ್ದೆ) ಹೋರಾಟಗಾರ್ತಿ ಶರ್ಮಿಳಾ ಅವರು 16 ವರ್ಷಗಳ ಉಪವಾಸ ಸತ್ಯಾಗ್ರಹವನ್ನು ಕಳೆದ ವರ್ಷ ಆಗಸ್ಟ್ ನಲ್ಲಿ ಕೊನೆಗೊಳಿಸಿದ್ದರು. ಇವರು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಒಕ್ರಮ್ ಇಬೊಬಿ ಸಿಂಗ್ ಅವರ ವಿರುದ್ಧ ತೌಬಲ್ ನಲ್ಲಿ ಸ್ಪರ್ಧೆಗಿಳಿದಿದ್ದಾರೆ. 
 ಮಣಿಪುರ ರಾಜ್ಯದಲ್ಲಿ ಮಾರ್ಚ್ 4 ಮತ್ತು 8ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

SCROLL FOR NEXT