ವಾಷಿಂಗ್ ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಭದ್ರತೆಯನ್ನು ವಾಪಸ್ ಪಡೆಯಲು ಚಿಂತನೆ ನಡೆಸಿದೆ.
ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತ ಹೊರಡಿಸಿದ್ದ ಕೆಲವೊಂದು ಆದೇಶಗಳನ್ನು ವಾಪಸ್ ಪಡೆಯಲು ಚಿಂತನೆ ನಡೆಸಿರುವುದಾಗಿ ಶಾಲೆಗಳಿಗೆ ಪತ್ರ ಬರೆದಿರುವ ಡೊನಾಲ್ಡ್ ಟ್ರಂಪ್ ಆಡಳಿತ, ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಶೌಚಾಲಯವನ್ನು ಬಳಕೆ ಮಾಡುವುದಕ್ಕೆ ಅನುಮತಿ ನಿರಾಕರಿಸುವುದು ಲೈಂಗಿಕ ತಾರತಮ್ಯ ವಿರುದ್ಧದ ನಿರ್ಬಂಧವನ್ನು ಉಲ್ಲಂಘಿಸುವಂತಿದೆ ಎಂದು ಹೇಳಿದ್ದಾರೆ.
ಬರಾಕ್ ಒಬಾಮ ಆಡಳಿತಾವಧಿಯಲ್ಲಿ ಹೊರಡಿಸಲಾಗಿದ್ದ ನೀತಿಗಳ ಹೇಳಿಕೆಗಳನ್ನು ಜಾರಿಗೆ ತರಲು ಶಾಲೆಗಳ ಆಡಳಿತ ಮಂಡಳಿ, ಪೋಷಕರು ಹೆಣಗುತ್ತಿರುವಂತಿದೆ ಎಂದು ಟ್ರಂಪ್ ಆಡಳಿತದ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ತೃತೀಯ ಲಿಂಗಿಗಳ ರಕ್ಷಣೆಯ ವಿಷಯದಲ್ಲಿ ಕೆಲವು ಮಾರ್ಪಾಡು ಮಾಡಬೇಕೆಂದು ಅಭಿಪ್ರಾಯಪಟ್ಟಿದೆ.
ಬರಾಕ್ ಒಬಾಮ ಆಡಳಿತಾವಧಿಯ ನಿಯಮಗಳನ್ನು ವಾಪಸ್ ಪಡೆಯುವುದೆಂದರೆ ತೃತೀಯ ಲಿಂಗಿಗಳ ಭದ್ರತೆಯನ್ನು ಸಂಪೂರ್ಣ ವಾಪಸ್ ಪಡೆಯುವುದು ಎಂದು ಅರ್ಥವಲ್ಲ. ಬೆದರಿಕೆ ಹಾಗೂ ಕಿರುಕುಳದಿಂದ ನೀಡಲಾಗುವ ರಕ್ಷಣೆಯನ್ನು ವಾಪಸ್ ಪಡೆಯುತ್ತಿಲ್ಲ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ.