ದೇಶ

ಎಬಿವಿಪಿ-ಎಐಎಸ್ಎ ಘರ್ಷಣೆ; ಎಫ್ಐಆರ್ ದಾಖಲಿಸಿಕೊಂಡ ದೆಹಲಿ ಪೊಲೀಸರು

Manjula VN

ನದವೆಹಲಿ: ರಾಜಧಾನಿ ದೆಹಲಿಯ ರಾಮಜಾಸ್ ಕಾಲೇಜಿನಲ್ಲಿ ಎಬಿವಿಪಿ ಹಾಗೂ ಎಐಎಸ್ಎ ನಡುವಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುರುವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ದೇಶದ್ರೋಹಿ ಘೋಷಣೆ ಕೂಗಿದ ವಿವಾದಕ್ಕೆ ಸಿಲುಕಿದ್ದ ದೆಹಲಿ ಜೆಎನ್'ಯು ವಿವಿಯ ವಿದ್ಯಾರ್ಥಿ ನಾಯಕ ಉಮರ್ ಖಾಲೀದ್ ನನ್ನು ವಿಚಾರಣ ಸಂಕಿರಣಕ್ಕೆ ಆಹ್ವಾನಿಸಿದ್ದರ ಸಂಬಂಧ ನಿನ್ನೆ ರಾಮಜಾಸ್ ಕಾಲೇಜಿನಲ್ಲಿ ಘರ್ಷಣೆ ಏರ್ಪಟ್ಟಿತ್ತು.

ಉಮರ್ ಖಾಲೀದ್ ಹಾಗೂ ಆತನ ಬಿಡುಗಡೆ ಪರ ಹೋರಾಟ ನಡೆಸಿದ್ದ ಶೆಹ್ಲಾ ರಶೀದ್ ರನ್ನು ರಾಮಜಾಸ್ ಕಾಲೇಜಿನ ವಿಚಾರಣ ಸಂಕಿರಣಕ್ಕೆ ಆಹ್ವಾನಿಸಿದ್ದಕ್ಕೆ ಎಬಿವಿಪಿ ವಿರೋಧ ವ್ಯಕ್ತಪಡಿಸಿತ್ತು. ಕಾಲೇಜಿನ ವಿಚಾರಣ ಸಂಕಿರಣದ ಕೊಠಡಿಗೆ ಬೀಗ ಹಾಕಿದ್ದ ಎಬಿವಿಪಿ, ಕಲ್ಲೂ ತೂರಾಟ ನಡೆಸಿತ್ತು. ಇದನ್ನು ವಿರೋಧಿಸಿ ಎಡರಂಗ ಬೆಂಬಲಿತ ಅಖಿಲ ಎಐಎಸ್ಎ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದ ಎಬಿವಿಪಿಗೆ ಅವಕಾಶ ನೀಡಲಿಲ್ಲ. ಈ ವೇಳೆ ಇಬ್ಬರ ನಡುವೆ ಘರ್ಷಣೆ ನಡೆದಿತ್ತು.

ಘರ್ಷಣೆಯಲ್ಲಿ ಎಬಿವಿಪಿಗೆ ಆರ್'ಎಸ್ಎಸ್ ಬೆಂಬಲ ವ್ಯಕ್ತಪಡಿಸಿತ್ತು. ಎಐಎಸ್ಎ ವಿದ್ಯಾರ್ಥಿಗಳಿಗೆ ಎಡರಂಗ ಬೆಂಬಲಿತ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿ ಆರತಿ ಶರ್ಮಾ, ಇಬ್ಬರು ಪತ್ರಕರ್ತರು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು 8 ಮಂದಿಗೆ ಗಾಯವಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಇಶಾ ಪಾಂಡೆ ಅವರು ಹೇಳಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದ್ದು, ಡಿಸಿಪಿ ರ್ಯಾಂಕ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ ಎಂದು ಪಾಂಡೆಯವರು ಹೇಳಿದ್ದಾರೆ.

SCROLL FOR NEXT