ಸಂಗ್ರಹ ಚಿತ್ರ 
ದೇಶ

ತೂಕದ ಪೊಲೀಸ್ ವಿರುದ್ಧ ಶೋಭಾ ಡೇ ಟ್ವೀಟ್, ಅಸಮಾಧಾನ ವ್ಯಕ್ತಪಡಿಸಿದ ಆರಕ್ಷಕ ಸಿಬ್ಬಂದಿ!

ಮುಂಬೈ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದ ವೇಳೆ ಖ್ಯಾತ ಅಂಕಣಗಾರ್ತಿ ಮತ್ತು ಬರಹಗಾರ್ತಿ ಶೋಭಾ ಡೇ ಅಧಿಕ ತೂಕದ ಪೊಲೀಸ್ ಸಿಬ್ಬಂದಿ ಕುರಿತಂತೆ ಮಾಡಿದ್ದ ಟ್ವೀಟ್ ವಿರುದ್ಧ ಸ್ವತಃ ಸಿಬ್ಬಂದಿಯೇ ಕಿಡಿಕಾರಿದ್ದಾರೆ.

ಮುಂಬೈ: ಮುಂಬೈ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದ ವೇಳೆ ಖ್ಯಾತ ಅಂಕಣಗಾರ್ತಿ ಮತ್ತು ಬರಹಗಾರ್ತಿ ಶೋಭಾ ಡೇ ಅವರು ಅಧಿಕ ತೂಕದ ಪೊಲೀಸ್ ಸಿಬ್ಬಂದಿ ಕುರಿತಂತೆ ಮಾಡಿದ್ದ ಟ್ವೀಟ್ ವಿರುದ್ಧ ಸ್ವತಃ  ಸಿಬ್ಬಂದಿಯೇ ಕಿಡಿಕಾರಿದ್ದಾರೆ.

ನಿನ್ನೆ ತೂಕದ ಪೊಲೀಸ್ ಸಿಬ್ಬಂದಿ ಕುರಿತಂತೆ ಟ್ವೀಟ್ ಮಾಡಿದ್ದ ಶೋಭಾಡೇ ಚುನಾವಣೆ ಭದ್ರತೆಗೆ "ಹೆವಿ ಪೊಲೀಸ್" ಬಂದೋಬಸ್ತ್ ಎಂದು ಚಿತ್ರ ಸಹಿತ ಟ್ವೀಟ್ ಮಾಡಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ  ಪೊಲೀಸರು ಶೋಭಾಡೇ ಅದೇ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡುತ್ತಾ, ನಾವು ಕೂಡ ಹಾಸ್ಯವನ್ನು ಸ್ವೀಕರಿಸುತ್ತೇವೆ. ಆದರೆ ಈಗ ನೀವು ಮಾಡಿರುವ ಹಾಸ್ಯ ಸರಿಯಲ್ಲ. ಪ್ರಸ್ತುತ ಈ ಚಿತ್ರದಲ್ಲಿರುವ ಸಿಬ್ಬಂದಿ ಮುಂಬೈ ಪೊಲೀಸ್  ಸಿಬ್ಬಂದಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಿಮ್ಮಿಂದ ಇಂತಹ ಪ್ರತಿಕ್ರಿಯೆ ನಿರೀಕ್ಷಿಸರಲಿಲ್ಲ ಎಂದು ಕಿಡಿಕಾರಿದ್ದರು.

ಇದಕ್ಕೆ ಉತ್ತರಿಸಿದ್ದ ಶೋಭಾಡೇ ಕೂಡ ಮಧ್ಯಪ್ರದೇಶ ಪೊಲೀಸ್ ಸಿಬ್ಬಂದಿ ವೈದ್ಯರನ್ನು ಕಾಣುವುದು ಉತ್ತಮ ಎಂದು ಮತ್ತೆ ವ್ಯಂಗ್ಯ ಮಾಡಿದ್ದರು. ಇದೀಗ ಶೋಭಾ ಡೇ ವಿರುದ್ಧ ಅಪಹಾಸ್ಯಕ್ಕೀಡಾಗಿದ್ದ ಪೊಲೀಸ್ ಸಿಬ್ಬಂದಿ  ಕಿಡಿಕಾರಿದ್ದು, ಸೋಮಾರಿತನದಿಂದಲೋ ಅಥವಾ ಅತಿಯಾಗಿ ತಿಂದಿದ್ದರಿಂದಲೋ ಬಂದ ತೂಕವಲ್ಲ. 1993ರಲ್ಲಿ ನನಗೆ ಪಿತ್ತಕೋಶ ಶಸ್ತ್ರಚಿಕಿತ್ಸೆಯಾಗಿತ್ತು. ಬಳಿಕ ಹಾರ್ಮೋನ್ ಗಳ ತೊಂದರೆಯಿಂದಾಗಿ ಈ ರೀತಿ ತೂಕ ಹೆಚ್ಚಾಗಿದೆ.  ಇದನ್ನು ಅಪಹಾಸ್ಯ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಟ್ವಿಟರ್ ನಲ್ಲಿ ವ್ಯಾಪಕ ಬೆಂಬಲ ದೊರೆಯುತ್ತಿದ್ದು, ಟ್ವೀಟ್ ಮಾಡಿದ್ದ ಶೋಭಾ ಡೇ ಮತ್ತೆ ಟ್ರೋಲ್ ಆಗಿದ್ದಾರೆ.

ಇನ್ನು ಈ ಹಿಂದೆ ಸಾಕಷ್ಟು ಭಾರಿ ವಿವಾದಾತ್ಮಕ ಟ್ವೀಟ್ ಮಾಡಿ ಟ್ವೀಟಿಗರ ಆಕ್ರೋಶಕ್ಕೆ ಶೋಭಾ ಡೇ ತುತ್ತಾಗಿದ್ದರು. ಈ ಹಿಂದೆ ರಿಯೋ ಒಲಿಂಪಿಕ್ಸ್ ಕುರಿತಂತೆ ಭಾರತೀಯ ಆಟಗಾರರನ್ನು ನಿಂದಿಸಿ ಶೋಭಾ ಡೇ ಆಕ್ರೋಶಕ್ಕೆ  ಕಾರಣರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ಮಾಜಿ ಸಿಇಸಿಗಳಿಗೆ ರಾಜ್ಯಪಾಲ, ಸಚಿವ ಸ್ಥಾನದ ಗಿಫ್ಟ್: ಕಾಂಗ್ರೆಸ್ ವಿರುದ್ಧ ಹಳೆಯ ಬಹುಮಾನಗಳ ಪಟ್ಟಿ ಬಿಚ್ಚಿಟ್ಟ ಬಿಜೆಪಿ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!