ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ 
ದೇಶ

ಪನ್ನೀರ್'ಸೆಲ್ವಂ ಬೆನ್ನಿಗೆ ನಿಂತ ಡಿಎಂಕೆ: ಜಯಲಲಿತಾ ಸಾವಿನ ಕುರಿತು ತನಿಖೆಗೆ ಆಗ್ರಹ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅನುಮಾನಾಸ್ಪದ ಸಾವಿನ ಕುರಿತಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದ ಒ.ಪನ್ನೀರ್ ಸೆಲ್ವಂ ಅವರಿಗೆ ಡಿಎಂಕೆ ಬೆಂಬಲ ವ್ಯಕ್ತಪಡಿಸಿದ್ದು, ಜಯಲಲಿತಾ ಅವರ ಸಾವಿನ ಕುರಿತು ಕೂಡಲೇ...

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅನುಮಾನಾಸ್ಪದ ಸಾವಿನ ಕುರಿತಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದ ಒ.ಪನ್ನೀರ್ ಸೆಲ್ವಂ ಅವರಿಗೆ ಡಿಎಂಕೆ ಬೆಂಬಲ ವ್ಯಕ್ತಪಡಿಸಿದ್ದು, ಜಯಲಲಿತಾ ಅವರ ಸಾವಿನ ಕುರಿತು ಕೂಡಲೇ ತನಿಖೆ ನಡೆಸುವಂತೆ ಶನಿವಾರ ಆಗ್ರಹಿಸಿದೆ. 
ಈ ಕುರಿತಂತೆ ಮಾತನಾಡಿರುವ ಡಿಎಂಕೆ ವಕ್ತಾರ ಎ. ಶರವಣನ್ ಅವರು, ನಮ್ಮ ನಾಯಕರು  ಕಟ್ಟಳೆಗೊಳಪಡದ ನಾಯಕರಾಗಿದ್ದಾರೆ. ಈಗ ಮಾತ್ರವಷ್ಟೇ ಅಲ್ಲ. ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗಿನಿಂದಲೂ ಸಾಕಷ್ಟು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಜಯಲಲಿತಾ ನಿಧನದ ಬಳಿಕವೂ ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದ್ದರು. ಏಮ್ಸ್ ವೈದ್ಯರಿದ್ದಾಗಲೂ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರೂ ಕೂಡ ತನಿಖೆಗೆ ಆಗ್ರಹಿಸುತ್ತಿದ್ದು, ಇದು ನಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ. 
ಜಯಲಲಿತಾ ಅವರ ಸಾವಿನ ಹಿಂದೆ ಸಾಕಷ್ಟು ನಿಗೂಢತೆಗಳು ಅಡಗಿವೆ. ಹೀಗಾಗಿ ಸಾವಿನ ಕುರಿತು ತನಿಖೆ ನಡೆಯಲೇಬೇಕಿದೆ. ಯಾವ ಕಾರಣಕ್ಕೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು:? ದಾಖಲೆಯ ಹಿಂದಿರುವ ಕಾರಣವೇನು? ದಾಖಲಾದ ಬಳಿಕ ಆಕೆಗೆ ಯಾವ ರೀತಿಯ ಚಿಕಿತ್ಸೆಗಳನ್ನು ನೀಡಲಾಯಿತು? ಎಂಬುದರ ಕುರಿತಂತೆ ತನಿಖೆ ನಡೆಯಲೇಬೇಕಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಹಾರ್ಮೊಜ್ ಮೇಲೆ ಈಗಲೂ ನಮ್ಮದೇ ನಿಯಂತ್ರಣ: ವಾಸ್ತವಕ್ಕೂ ಅಮೆರಿಕ ಹೇಳಿಕೆಗಳಿಗೂ ತಾಳೆಯಾಗುವುದಿಲ್ಲ- ಇರಾನ್