ನವದೆಹಲಿ: ಟಾಪ್ ಲೋಡ್ ವಾಷಿಂಗ್ ಮಶಿನ್ ನಲ್ಲಿ ಮುಳುಗಿ ಮೂರು ವರ್ಷದ ಅವಳಿ ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಶನಿವಾರ ನಡೆದಿದೆ.
ನಕ್ಷ ಮತ್ತು ನೀಶು ಸಾವನ್ನಪ್ಪಿದ್ದ ಕಂದಮ್ಮಗಳು. ಬಟ್ಟೆ ಒಗೆಯುವ ಸಲುವಾಗಿ ವಾಷಿಂಗ್ ಮಶಿನ್ನಿನಲ್ಲಿ ನೀರು ತುಂಬಿದ್ದ ತಾಯಿ ಡಿಟರ್ಜಂಟ್ ತರಲು ಅಂಗಡಿಗೆ ಹೋಗಿದ್ದಾರೆ. ಮಶಿನ್ ನಲ್ಲಿ 15 ಲೀ. ನೀರಿ ಇತ್ತು. ಈ ವೇಳೆ ಬಾಲಕರು ಮಶಿನ್ ಹತ್ತಿದ್ದಾರೆ. ನಂತರ ಮಶಿನ್ ಒಳಗೆ ಬಿದ್ದಿದ್ದಾರೆ.
ನಂತರ ತಾಯಿ ಮನೆಗೆ ಹಿಂತಿರುಗಿ ಬಂದಾಗ ಮಕ್ಕಳು ಕಾಣಿಸಲಿಲ್ಲ. ಆತಂಕಗೊಂಡ ಆಕೆ ಪತಿಗೆ ಕರೆ ಮಾಡಿದ್ದಾಳೆ. ಪತಿ ಮನೆಗೆ ಆಘಮಿಸಿ ಹುಡುಕಾಡಿದಾಗ ಕೊನಗೆ ಮಕ್ಕಳು ವಾಷಿಂಗ್ ಮಶಿನ್ ನಲ್ಲಿ ಮೃತರಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಮಕ್ಕಳು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಕೇವಲ 30 ನಿಮಿಷಗಳಲ್ಲಿ ಘಟನೆ ನಡೆದುಹೋಗಿದೆ.