ಸಾಂದರ್ಭಿಕ ಚಿತ್ರ 
ದೇಶ

ದೆಹಲಿ ವಿವಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ; 4 ಬಂಧನ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿರುವುದಾಗಿ ಪೊಲೀಸರು ಭಾನುವಾರ...

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿರುವುದಾಗಿ ಪೊಲೀಸರು ಭಾನುವಾರ ಹೇಳಿದ್ದಾರೆ. 
ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಕೆಲಸ ದಿನಗಳ ಹಿಂದಷ್ಟೇ 5 ಮಂದಿಯಿದ್ದ ಆರೋಪಿಗಳ ಗುಂಪೊಂದು ಸಾಮೂಹಿಕ ಅತ್ಯಾಚಾರ ಮಾಡಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಇದೀಗ ನಾಲ್ಕು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಬಂಧಿತ ನಾಲ್ವರ ಪೈಕಿ ಇಬ್ಬರು ಆರೋಪಿಗಳು ವಿದ್ಯಾರ್ಥಿನಿ ವ್ಯಾಸಾಂಗ ಮಾಡುತ್ತಿದ್ದ ಕಾಲೇಜಿನ ವಿದ್ಯಾರ್ಥಿಗಳೇ ಆಗಿದ್ದಾರೆಂದು ತಿಳಿದುಬಂದಿದೆ. ಮತ್ತೊಬ್ಬ ಯುವಕ ಫರಿದಾಬಾದ್ ನಲ್ಲಿರುವ ವಿದ್ಯಾರ್ಥಿನಿಯ ಗೆಳೆಯನೇ ಆಗಿದ್ದಾನೆಂದು ಹೇಳಲಾಗುತ್ತಿದೆ. 
ಫೆ.3 ರಂದು ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಯುವತಿಯನ್ನು ಆಕೆಯ ಇಬ್ಬರು ಗೆಳೆಯರಾದ ಗೌರವ್ ಮತ್ತು ಸುನ್ನಿ ಎಂಬುವವರು ಬೈಕ್ ನಲ್ಲಿ ಕೆರೆದುಕೊಂಡು ಬಂದಿದ್ದಾರೆ. ಗೆಳೆಯರು ಪಾರ್ಟಿ ಎಂದು ಹೇಳಿದಾಗ ಮೊದ ಮೊದಲು ಯುವತಿ ಬೇಡ ಎಂದು ಹೇಳಿದ್ದಾಳೆ. ಪಾರ್ಟಿಗೆ ಮತ್ತಿಬ್ಬರು ಗೆಳತಿಯರೂ ಕೂಡ ಬರುತ್ತಿದ್ದು, ತಾನೂ ಕೂಡ ಪಾರ್ಟಿಯಲ್ಲಿ ಭಾಗಿಯಾಗಲು ಬರ ಬೇಕೆಂದು ಯುವಕರು ಆಕೆಯ ಮನವೊಲಿಸಿ ಕರೆದುಕೊಂಡು ಹೋಗಿದ್ದಾರೆ. 
ದ್ವಿಚಕ್ರ ವಾಹನ ಸಚಿನ್ ಎಂಬಾತನಿಗೆ ಸೇರಿದ್ದಾಗಿದ್ದು, ಯುವತಿಯನ್ನು ಕರೆದೊಯ್ದ ಆರೋಪಿಗಳು ಫರೀದಾಬಾದ್ ನಲ್ಲಿರುವ ರೊಹ್ತಾಶ್ ಎಂಬುವವನ ಮನೆಗೆ ಕರೆದುಕೊಂಡು ಹೋಗುದ್ದಾರೆ. ಈ ವೇಳೆ ಸಚಿನ್, ರೊಹ್ತಾಶ್, ಗೌರವ್, ಸುನ್ನಿ ಹಾಗೂ ಮತ್ತೊಬ್ಬ ಆರೋಪಿ ಎಲ್ಲರೂ ಸೇರಿ ಯುವತಿ ಮೇಲೆ ಸಾಮೂಹಿಕವಾದಿ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರ ಬಳಿಕ ಆರೋಪಿಗಳು ಯುವತಿಗೆ ಬೆದರಿಕೆ ಹಾಕಿದ್ದಾರೆ. 
ಬಳಿಕ ವಿನೋದ್ ಎಂಬಾತ ಯುವತಿಯನ್ನು ಡ್ರಾಪ್ ಮಾಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಕಾರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿರುವ ಆತ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಘಟನೆ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದ ಯುವತಿ ಕಾಲೇಜಿಗೆ ಹೋಗುತ್ತಿರಲಿಲ್ಲ. ನಂತರ ವಿದ್ಯಾರ್ಥಿನಿ ಧೈರ್ಯ ಮಾಡಿ ಕಾಲೇಜಿನ ಆಡಳಿತ ಮಂಡಳಿಗೆ ವಿಚಾರ ತಿಳಿಸಿದ್ದಾಳೆ. 
ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ದೆಹಲಿಯ ಲಜ್ಪತ್ ನಗರ ಪೊಲೀಸರು ಫೆ.18 ರಂದು ಎಫ್ಐಆರ್ ದಾಖಲಿಸಿಕೊಂಡಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿರುವುದಾಗಿ ಪೊಲೀಸರು ಭಾನುವಾರ ಹೇಳಿದ್ದಾರೆ. 
ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಕೆಲಸ ದಿನಗಳ ಹಿಂದಷ್ಟೇ 5 ಮಂದಿಯಿದ್ದ ಆರೋಪಿಗಳ ಗುಂಪೊಂದು ಸಾಮೂಹಿಕ ಅತ್ಯಾಚಾರ ಮಾಡಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಇದೀಗ ನಾಲ್ಕು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಬಂಧಿತ ನಾಲ್ವರ ಪೈಕಿ ಇಬ್ಬರು ಆರೋಪಿಗಳು ವಿದ್ಯಾರ್ಥಿನಿ ವ್ಯಾಸಾಂಗ ಮಾಡುತ್ತಿದ್ದ ಕಾಲೇಜಿನ ವಿದ್ಯಾರ್ಥಿಗಳೇ ಆಗಿದ್ದಾರೆಂದು ತಿಳಿದುಬಂದಿದೆ. ಮತ್ತೊಬ್ಬ ಯುವಕ ಫರಿದಾಬಾದ್ ನಲ್ಲಿರುವ ವಿದ್ಯಾರ್ಥಿನಿಯ ಗೆಳೆಯನೇ ಆಗಿದ್ದಾನೆಂದು ಹೇಳಲಾಗುತ್ತಿದೆ. 
ಫೆ.3 ರಂದು ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಯುವತಿಯನ್ನು ಆಕೆಯ ಇಬ್ಬರು ಗೆಳೆಯರಾದ ಗೌರವ್ ಮತ್ತು ಸುನ್ನಿ ಎಂಬುವವರು ಬೈಕ್ ನಲ್ಲಿ ಕೆರೆದುಕೊಂಡು ಬಂದಿದ್ದಾರೆ. ಗೆಳೆಯರು ಪಾರ್ಟಿ ಎಂದು ಹೇಳಿದಾಗ ಮೊದ ಮೊದಲು ಯುವತಿ ಬೇಡ ಎಂದು ಹೇಳಿದ್ದಾಳೆ. ಪಾರ್ಟಿಗೆ ಮತ್ತಿಬ್ಬರು ಗೆಳತಿಯರೂ ಕೂಡ ಬರುತ್ತಿದ್ದು, ತಾನೂ ಕೂಡ ಪಾರ್ಟಿಯಲ್ಲಿ ಭಾಗಿಯಾಗಲು ಬರ ಬೇಕೆಂದು ಯುವಕರು ಆಕೆಯ ಮನವೊಲಿಸಿ ಕರೆದುಕೊಂಡು ಹೋಗಿದ್ದಾರೆ. 
ದ್ವಿಚಕ್ರ ವಾಹನ ಸಚಿನ್ ಎಂಬಾತನಿಗೆ ಸೇರಿದ್ದಾಗಿದ್ದು, ಯುವತಿಯನ್ನು ಕರೆದೊಯ್ದ ಆರೋಪಿಗಳು ಫರೀದಾಬಾದ್ ನಲ್ಲಿರುವ ರೊಹ್ತಾಶ್ ಎಂಬುವವನ ಮನೆಗೆ ಕರೆದುಕೊಂಡು ಹೋಗುದ್ದಾರೆ. ಈ ವೇಳೆ ಸಚಿನ್, ರೊಹ್ತಾಶ್, ಗೌರವ್, ಸುನ್ನಿ ಹಾಗೂ ಮತ್ತೊಬ್ಬ ಆರೋಪಿ ಎಲ್ಲರೂ ಸೇರಿ ಯುವತಿ ಮೇಲೆ ಸಾಮೂಹಿಕವಾದಿ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರ ಬಳಿಕ ಆರೋಪಿಗಳು ಯುವತಿಗೆ ಬೆದರಿಕೆ ಹಾಕಿದ್ದಾರೆ. 
ಬಳಿಕ ವಿನೋದ್ ಎಂಬಾತ ಯುವತಿಯನ್ನು ಡ್ರಾಪ್ ಮಾಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಕಾರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿರುವ ಆತ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಘಟನೆ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದ ಯುವತಿ ಕಾಲೇಜಿಗೆ ಹೋಗುತ್ತಿರಲಿಲ್ಲ. ನಂತರ ವಿದ್ಯಾರ್ಥಿನಿ ಧೈರ್ಯ ಮಾಡಿ ಕಾಲೇಜಿನ ಆಡಳಿತ ಮಂಡಳಿಗೆ ವಿಚಾರ ತಿಳಿಸಿದ್ದಾಳೆ. 
ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ದೆಹಲಿಯ ಲಜ್ಪತ್ ನಗರ ಪೊಲೀಸರು ಫೋ.18 ರಂದು ಎಫ್ಐಆರ್ ದಾಖಲಿಸಿಕೊಂಡಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT