ದೇಶ

ಮಣಿಪುರ ಸರ್ಕಾರ ನೀಡಿದ್ದ ಬೆಂಗಾವಲು ಪಡೆ ಭದ್ರತೆ ನಿರಾಕರಿಸಿದ ಇರೋಮ್ ಶರ್ಮಿಳಾ

Shilpa D

ಇಂಫಾಲ್: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಣಿಪುರ ಸರ್ಕಾರ ಒದಗಿಸಿದ್ದ ಬೆಂಗಾವಲು  ಪಡೆ ಭದ್ರತೆ  ಪಡೆಯಲು ಇರೋಮ್ ಶರ್ಮಿಳಾ ನಿರಾಕರಿಸಿದ್ದಾರೆ.

ನನಗೆ ಯಾರೂ ಶತೃಗಳಿಲ್ಲ, ಭಯ ಪಡುವ ಅವಶ್ಯಕತೆಯಿಲ್ಲ ಹೀಗಾಗಿ ನನಗೆ ಸೆಕ್ಯೂರಿಟಿ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ. ನನಗೆ ವಿಐಪಿ ಸಂಸ್ಕೃತಿ ಇಷ್ಟವಿಲ್ಲ, ಸಶಸ್ತ್ರ ಪಡೆ ಜೊತೆ ಸುತ್ತುವರಿಯುವುದು ನನಗೆ ಬೇಕಿಲ್ಲ, ಜನರ ಮಧ್ಯೆ ಇರಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಶರ್ಮಿಳಾ ಅವರು ಎಲ್ಲಾ ಸಮಯದಲ್ಲೂ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದರು. ಚುನಾವಣಾ ಆಯೋಗದ ನಿರ್ದೇಶನದಂತೆ ಶರ್ಮಿಳಾ ಅವರಿಗೆ ಸೆಕ್ಯೂರಿಟಿ ನೀಡಲಾಗಿದೆ. ಅವರ ರಕ್ಷಣೆಗಾಗಿ ಭದ್ರತ ಪಡೆ ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುರೇಶ್ ಬಾಬು ಹೇಳಿದ್ದಾರೆ. ಮಾರ್ಚ್ 11 ರಂದು ನಡೆಯುವ ಮಣಿಪುರ ವಿಧಾನ ಸಭೆ ಚುನಾವಣೆಯಲ್ಲಿ ಶರ್ಮಿಳಾ ಸ್ಪರ್ಧಿಸಿದ್ದಾರೆ.

SCROLL FOR NEXT