ಅಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಕಾಲುವೆಗೆ ಉರುಳಿ ಬಿದ್ದ ಬಸ್, 11 ಸಾವು, 30 ಜನರಿಗೆ ಗಾಯ
ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ವೇಗವಾಗಿ ಚಲಿಸುತ್ತಿದ್ದ ಬಸ್ ವೊಂದು ಕಾಲುವೆಗೆ ಉರುಳಿಬಿದ್ದ ಪರಿಣಾಮ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿ 30ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಮಂಗಳವಾರ ನಡೆದಿದೆ.
ಭುವನೇಶ್ವರದಿಂದ ಹೈದಾರಾಬಾದ್ ತೆರಳುತ್ತಿದ್ದ ಬಸ್ ಖಾಸಗಿ ಬಸ್ ವೊಂದು ಮುಲಪಡು ಬಳಿ ಬೆಳಿಗ್ಗೆ 5.30 ರ ಸುಮಾರಿಗೆ ಬಂದಿದೆ. ಈ ವೇಳೆ ಸೇತುವೆಯ ಬಳಿಯಿದ್ದ ರಸ್ತೆ ವಿಭಜಕಕ್ಕೆ ಇದ್ದಕ್ಕಿದ್ದಂತೆ ಡಿಕ್ಕಿ ಹೊಡೆದಿರುವ ಬಸ್ ಕಾಲುವೆಗೆ ಉರುಳಿ ಬಿದ್ದಿದೆ.
ಒಡಿಶಾದಿಂದ ತೆಲಂಗಾಣ ರಾಜ್ಯಕ್ಕೆ ಬಂದ ಈ ಖಾಸಗಿ ಬಸ್ ವಿಜಯವಾಡ ಬಳಿ ನಿಂತಿದೆ. ನಂತರ ಚಾಲಕನನ್ನು ಬದಲಿಸಿಕೊಂಡು ಹೊಸ ಚಾಲಕನೊಂದಿಗೆ ಪುನಃ ಪ್ರಯಾಣ ಆರಂಭಿಸಿದೆ.
ಬೆಳಗಿನ ಜಾವವಾದ್ದರಿಂದ ಬಸ್ ಚಾಲನೆ ಮಾಡುವಾಗ ಚಾಲಕ ನಿದ್ರೆಗೆ ಜಾರಿದ್ದರಿಂದಾಗಿ, ನಿರ್ಲಕ್ಷ್ಯದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics