ದೇಶ

ದಾವೂದ್'ಗೆ ಹುತಾತ್ಮ ಯೋಧನ ಪುತ್ರಿ ಹೋಲಿಕೆ: ಬಿಜೆಪಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್

Manjula VN
ನವದೆಹಲಿ: ಎಬಿವಿಪಿ ತಿರುಗಿಬಿಟ್ಟು ಸಾಕಷ್ಟು ಟೀಕೆಗಳಿಗೆ ಗುರಿಯಾಗಿರುವ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್'ಮೆಹರ್ ಕೌರ್ ಅವರಿಗೆ ಕಾಂಗ್ರೆಸ್ ಮಂಗಳವಾರ ಬೆಂಬಲ ಸೂಚಿಸಿದ್ದು, ಭೂಗತ ಪಾತಕಿ ದಾವೂದ್'ಗೆ ಗುರ್'ಮೆಹರ್ ಅವರನ್ನು ಹೋಲಿಕೆ ಮಾಡಿದ್ದಕ್ಕೆ ಬಿಜೆಪಿ ವಿರುದ್ಧ ಕೆಂಡಕಾರಿದೆ. 
ರಾಮ್ಜಾಸ್ ಕಾಲೇಜು ಘರ್ಷಣೆ ಪ್ರಕರಣ ಸಂಬಂಧ ವಿವಾದದಲ್ಲಿ ಸಿಲುಕಿಹಾಕಿರುವ ಗುರ್'ಮೆಹರ್ ಕೌರ್ ಅವರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ದೇಶದ ಯುವಕರ ಮೇಲೆ ಬಿಜೆಪಿ ಒತ್ತಡ ಹೇರುತ್ತಿದ್ದು, ಪ್ರಕರಣದಲ್ಲಿ ದೇಶಭಕ್ತ ನಾಟವನ್ನು ಆಡುತ್ತಿದೆ ಎಂದು ಹೇಳಿದ್ದಾರೆ. 
ಶ್ರೀ ರಾಮ ಕಾಜೇಲಿನ ವಿದ್ಯಾರ್ಥಿಗೆ ಅನಾವಶ್ಯಕವಾಗಿ ಬಿಜೆಪಿ ದೇಶ-ವಿರೋಧ ಪಟ್ಟವನ್ನು ಕಟ್ಟುತ್ತಿದೆ. ನಾಗರೀಕರೊಂದಿಗೆ ಬಿಜೆಪಿ ಹೇಗೆ ನಡೆದುಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅನಾವಶ್ಯಕವಾಗಿ ವಿದ್ಯಾರ್ಥಿನಿಯನ್ನು ದೂಷಿಸಲಾಗುತ್ತಿದ್ದು, ದೇಶ ವಿರೋಧಿ ಪಟ್ಟವನ್ನು ನೀಡಲಾಗುತ್ತಿದೆ. ಕೇವಲ ತಮ್ಮದೊಂದೇ ದೇಶಭಕ್ತ ಪಕ್ಷವೆಂದೂ ತೋರಿಸಿಕೊಳ್ಳಲು ಬಿಜೆಪಿ ಈ ರೀತಿಯಾಗಿ ಮಾಡುತ್ತಿದೆ ಎಂದು ತಿಳಿಸಿದ್ದಾರೆ. 
ಆರಂಭಿಕ ದಿನಗಳಿಂದಲೂ ಬಿಜೆಪಿ ಇದೇ ರೀತಿಯ ತಂತ್ರಗಳನ್ನು ಬಳಸಿಕೊಂಡು ಬರುತ್ತಿದೆ. ಚುನಾವಣೆ ಬರುತ್ತಿದ್ದಂತೆಯೇ ದೇಶದ ಕುರಿತಂತೆ ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡಲು ಆರಂಭಿಸುತ್ತಾರೆ. ಈ ಮೂಲಕ ಮತಗಳನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತದೆ. ಗೃಹ ಸಚಿವಾಲಯ ಹಾಗೂ ಬಿಜೆಪಿ ನಾಯಕರು ವಿದ್ಯಾರ್ಥಿನಿಯ ಮೇಲೆ ಒತ್ತಡವನ್ನು ಹೇರುತ್ತಿದೆ. ಇದು ನಿಜಕ್ಕೂ ಉತ್ತಮವಾದ ಬೆಳವಣಿಗೆಯಲ್ಲ. ದೇಶದ ಮೇಲೆ ಇದು ಋಣಾತ್ಮಕ ಪರಿಣಾಮ ಬೀರಲಿದೆ. 
ಪ್ರತೀಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಕೆಲವು ತಮ್ಮ ಅಭಿಪ್ರಾಯಗಳನ್ನು ಒಂದು ಹೆಜ್ಜೆ ಮುಂದೆಯಿಟ್ಟು ವ್ಯಕ್ತಪಡಿಸುತ್ತಾರೆ. ಇದನ್ನು ಕೆಲವರು ಒಪ್ಪುತ್ತಾರೆ, ಕೆಲವರು ವಿರೋಧಿಸುತ್ತಾರೆ. ಆದರೆ, ಪ್ರಸ್ತುತ ಕೇಂದ್ರ ಸರ್ಕಾರ ನಿರ್ಮಾಣ ಮಾಡುತ್ತಿರುವ ವಾತಾವರಣದಲ್ಲಿ ದೇಶದ ಹಿತಾಸಕ್ತಿಯಿಲ್ಲ ಎಂದಿದ್ದಾರೆ. 
SCROLL FOR NEXT