ದೇಶ

ಬಿಜೆಪಿ ಪಕ್ಷದವಳೆಂದು ಜಾಮಿಯಾ ಇಸ್ಲಾಮಿಯಾದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿರಲಿಲ್ಲ: ಶಾಜಿಯಾ ಇಲ್ಮಿ

Vishwanath S
ನವದೆಹಲಿ: ತ್ರಿವಳಿ ತಲಾಖ್ ಸಂಬಂಧ ಜಾಮಿಯಾ ಮಿಲಿನ್ ಇಸ್ಲಾಮಿಯ ವಿಶ್ವವಿದ್ಯಾಲಯದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಬಿಜೆಪಿ ಪಕ್ಷದವಳೆಂಬ ಕಾರಣಕ್ಕೆ ನನಗೆ ಮಾತನಾಡಲು ಅವಕಾಶ ನೀಡಿರಲಿಲ್ಲ ಎಂದು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಆರೋಪಿಸಿದ್ದಾರೆ. 
ತ್ರಿವಳಿ ತಲಾಖ್ ಸಂಬಂಧ ವಿಚಾರ ಸಮ್ಮೇಳನದಲ್ಲಿ ಮಾತನಾಡಲು ನನ್ನನ್ನು ಆಹ್ವಾನಿಸಲಾಗಿತ್ತು. ಆದರೆ ನಾನು ಕೇಸರಿ ಪಾಳಯದಲ್ಲಿ ಗುರುತಿಸಿಕೊಂಡಿರುವುದರಿಂದ ನನಗೆ ಮಾತನಾಡಲು ಅವಕಾಶ ನೀಡರಲಿಲ್ಲ ಎಂದು ಹೇಳಿದ್ದಾರೆ. 
ನಾನು ಎಂದಿಗೂ ಗಲಭೆ ಸೃಷ್ಠಿಸುವಂತಾ ಹೇಳಿಕೆಗಳನ್ನು ನೀಡಿಲ್ಲ. ನಾನು ಗಲಭೆಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೆ. ನಾನು ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೋರಾಡಿದ ಅಣ್ಣಾ ಹಜಾರೆ ಹೋರಾಟದಲ್ಲಿ ಭಾಗವಹಿಸಿದ್ದೀನಿ ಎಂದು ಹೇಳಿದ್ದಾರೆ. 
ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ದೇಶ ದ್ರೋಹಿ ಘೋಷಣೆ ಕೂಗಿದ ಆರೋಪಿಗಳಾದ ಉಮರ್ ಖಲಿದ್ ಮತ್ತು ರಶೀದ್ ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ಸೆಮಿನಾರ್ ಮಾಡಲು ಅವಕಾಶ ನೀಡಿದ್ದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ದೆಹಲಿಯ ಶ್ರೀರಾಮ ಮಹಿಳಾ ಕಾಲೇಜಿನ ವಿದ್ಯಾರ್ಥಿ ಗುರ್‌ಮೆಹರ್ ಕೌರ್‌ ರಾಮ್‌ಜಾಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ಸಂಭವಿಸಿದ ನಂತರ ನಾನು ಎಬಿವಿಪಿಗೆ ಹೆದರುವುದಿಲ್ಲ ಎಂಬ ಅಭಿಯಾನ ಆರಂಭಿಸಿದ್ದರು. ಈ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. 
SCROLL FOR NEXT