ಇಂಫಾಲ್: ಮಣಿಪುರ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ನಾಗ ಶಾಂತಿ ಒಪ್ಪಂದವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ಹವಣಿಸುತ್ತಿವೆ.
ಕೇಂದ್ರ ಸರ್ಕಾರದ ನಾಗ ಶಾಂತಿ ಒಪ್ಪಂದ ಯಾವ ಅಂಶಗಳನ್ನು ಒಳಗೊಂಡಿದೆ ಎಂಬುದು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಗೊತ್ತು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಂಗಳವಾರ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರರ ನಾಗಶಾಂತಿ ಒಪ್ಪಂದದಲ್ಲಿರುವ ಅಂಶಗಳ ಬಗ್ಗೆ ಸ್ವತಃ ಮಣಿಪುರ ಮುಖ್ಯಮಂತ್ರಿಗಳಿಗೂ ತಿಳಿದಿಲ್ಲ ಎಂದು ಆರೋಪಿಸಿದ್ದಾರೆ.
ಮಣಿಪುರದಲ್ಲಿ ಉಚಿತ ವಿದ್ಯುತ್ ನೀಡುವ ಸಂಬಂಧ ಈ ಒಪ್ಪಂದದಲ್ಲಿ ಸಹಿ ಮಾಡಲಾಗಿಯೇ ಎಂಬುದು ಮೋದಿ ಅವರಿಗೆ ಮಾತ್ರ ತಿಳಿದಿದೆ. ಏಕೆಂದರೇ ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೂ ಇದರ ಬಗ್ಗೆ ಮಾಹಿತಿಯಿಲ್ಲ ಎಂದು ದೂರಿದ್ದಾರೆ.
ನಾಗ ಬಂಡಾಯಗಾರರ ಗುಂಪಿನ ಜೊತೆ 2015 ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ನಾಗ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಮಣಿಪುರ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ನಡುವೆ ವಾಸವಿರುವ ನಾಗಾಗಳನ್ನೆಲ್ಲಾ ಒಟ್ಟಿಗೆ ಸೇರಿಸಿ ಗ್ರೇಟರ್ ನಾಗಾಲ್ಯಾಂಡ್ ರಚಿಸುವ ಉದ್ದೇಶ ನಾಗಾ ಬಂಡುಕೋರರ ಗುಂಪಿನದಾಗಿತ್ತು. ದರೆ ಇದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಶನಿವಾರ ಪ್ರಧಾನಿ ಮೋದಿ ಮಣಿಪುರ ಕೇಂದ್ರಾಡಳಿತ ಪ್ರದೇಶ ಏಕತೆಗೆ ಧಕ್ಕೆಯಾಗುವ ಯಾವುದೇ ಒಂದೇ ಒಂದು ಪದ ನಾಗಾ ಶಾಂತಿ ಒಪ್ಪಂದದಲ್ಲಿ ಇಲ್ಲ ಎಂದು ಮೋದಿ ಭರವಸೆ ನೀಡಿದ್ದಾರೆ. ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಮಣಿಪುರವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಮೋದಿ ಆರೋಪಿಸಿದ್ದರು.