ಸೈಕಲ್ ಚಿಹ್ನೆಗೆ ನಿರ್ಬಂಧ ಸಾಧ್ಯತೆ: ಚುನಾವಣಾ ಆಯೋಗದ ಮಾಜಿ ಆಯುಕ್ತ
ಸಮಾಜವಾದಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಉಂಟಾಗಿ ಪಕ್ಷದ ಚಿಹ್ನೆಗಾಗಿ ಎರಡು ಬಣಗಳು ಕಿತ್ತಾಡುತ್ತಿರುವ ಹಿನ್ನೆಲೆಯಲ್ಲಿ ಸೈಕಲ್ ಚಿಹ್ನೆಯನ್ನು ಯಾರಿಗೂ ನೀಡದೇ ನಿರ್ವಂಧಿಸುವ ಸಾಧ್ಯತೆ ಇದೆ
ನವದೆಹಲಿ: ಸಮಾಜವಾದಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಉಂಟಾಗಿ ಪಕ್ಷದ ಚಿಹ್ನೆಗಾಗಿ ಎರಡು ಬಣಗಳು ಕಿತ್ತಾಡುತ್ತಿರುವ ಹಿನ್ನೆಲೆಯಲ್ಲಿ ಸೈಕಲ್ ಚಿಹ್ನೆಯನ್ನು ಯಾರಿಗೂ ನೀಡದೇ ನಿರ್ವಂಧಿಸುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್ ವೈ ಖುರೇಷಿ ಹೇಳಿದ್ದಾರೆ.
ಸೈಕಲ್ ಪಕ್ಷದ ಚಿಹ್ನೆ ಪಡೆಯಲು ಎರಡೂ ಬಣಗಳು ದಾಖಲೆಗಳನ್ನು ಒದಗಿಸುತ್ತವೆ. ದಾಖಲೆಗಳ ಪರಿಶೀಲನೆಗೆ 4-5 ತಿಂಗಳು ಕಾಲಾವಕಾಶ ಬೇಕಿದ್ದು, ಚುನಾವಣೆಗೂ ಮುನ್ನ ಇತ್ಯರ್ಥವಾಗುದು ಕಷ್ಟ ಸಾಧ್ಯ ಎಂದು ಖುರೇಷಿ ಅಭಿಪ್ರಾಯಪಟ್ಟಿದ್ದಾರೆ.
ಚಿಹ್ನೆ ಪಡೆಯಲು ಎರಡು ಬಣಗಳ ನಡುವೆ ಪೈಪೋಟಿ ನಡೆದರೆ ಈಗಿರುವ ಸೈಕಲ್ ಚಿಹ್ನೆಗೆ ನಿರ್ಬಂಧ ವಿಧಿಸಿ ಸಮಾಜವಾದಿ ಪಕ್ಷಕ್ಕೆ ತಾತ್ಕಾಲಿಕ ಚಿಹ್ನೆ ನೀಡಲಾಗುತ್ತದೆ ಎಂದು ಖುರೇಷಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.