ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯದ ನಿರ್ಧಾರವನ್ನು ನಿರಂತರವಾಗಿ ಟೀಕಿಸುತ್ತಿರುವ ಕಾಂಗ್ರೆಸ್ ವಾಗ್ದಾಳಿಯನ್ನು ಮುಂದುವರೆಸಿದ್ದು, ಪ್ರಧಾನಿ ಮೋದಿ ಪ್ರಾರಂಭಿಸಿರುವ ಶುದ್ಧಿ ಯಜ್ಞ ತಡೆಗಟ್ಟಲಾಗದ ಕಾಡ್ಗಿಚ್ಚು ಇದ್ದಂತೆ ಎಂದು ಲೇವಡಿ ಮಾಡಿದೆ.
ನೋಟು ಅಮಾನ್ಯದ ನಿರ್ಧಾರ ಘೋಷಣೆಯಾದ ಬಳಿಕ ಈ ವರೆಗೂ 100 ಜನರು ಸಾವನ್ನಪ್ಪಿದ್ದು, ತಡೆಗಟ್ಟಲಾರದ ಕಾಡ್ಗಿಚ್ಚಾಗಿ ಪರಿಣಮಿಸಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ನೋಟು ಅಮಾನ್ಯದ ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದು ಎಲ್ಲಾ ಕಪ್ಪುಹಣವೂ ಸಕ್ರಮವಾಗಿದೆ, ಇಷ್ಟೆಲ್ಲಾ ಆದರೂ ಕೇಂದ್ರ ಸರ್ಕಾರ ನೋಟು ಅಮಾನ್ಯದ ನಿರ್ಧಾರದ ಬಗ್ಗೆ ಸೂಕ್ತ ಅಂಕಿ-ಅಂಶಗಳನ್ನು ನೀಡಿಲ್ಲ ಎಂದು ಚೌಹಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.