ದೇಶ

ಪಾಕಿಸ್ತಾನದ ದ್ವಿಮುಖ ನೀತಿಯನ್ನು ಟ್ರಂಪ್ ಸಹಿಸುವುದಿಲ್ಲ: ರಿಪಬ್ಲಿಕನ್ ಹಿಂದೂ ಸಂಘಟನೆ

Srinivas Rao BV
ನವದೆಹಲಿ: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ದ್ವಿಮುಖ ನೀತಿ/ ನಿಲುವುಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ರಿಪಬ್ಲಿಕನ್ ಪಕ್ಷವನ್ನು ಬೆಂಬಲಿಸುವ ಹಿಂದೂ ಸಂಘಟನೆಯ ಮುಖ್ಯಸ್ಥ, ಭಾರತೀಯ ಮೂಲದ ಉದ್ಯಮಿ ಶಾಲಭ್ ಕುಮಾರ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ಬಗ್ಗೆ ಎಎನ್ ಐ ಸುದ್ದಿ ಸಂಸ್ಥೆಗೆ ವಿವರಣೆ ನೀಡಿರುವ ಶಾಲಭ್ ಕುಮಾರ್, "ಭಾರತದ ನೆರೆ ರಾಷ್ಟ್ರಗಳ ದ್ವಿಮುಖ ನೀತಿ/ ನಿಲುವುಗಳನ್ನು ಸಹಿಸುವುದಿಲ್ಲ" ಎಂದು ಭೇಟಿಯ ವೇಳೆ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ. 
ಭಯೋತ್ಪಾದನೆ ವಿರುದ್ಧ ಹೋರಾಡಲು ಮಿತ್ರ ರಾಷ್ಟ್ರಗಳಿಂದ ರಕ್ಷಣಾ ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಲಭ್ ಕುಮಾರ್ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಶಾಲಭ್ ಬಿಜೆಪಿ ಹಾಗೂ ಆರ್ ಎಸ್ಎಸ್ ನೊಂದಿಗೂ ನಿಕಟವಾಗಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆಯಲ್ಲಿ ನ್ಯೂ ಜರ್ಸಿಯಲ್ಲಿ ಟ್ರಂಪ್ ಪರವಾಗಿ ರ್ಯಾಲಿ ನಡೆಸಿ, ಟ್ರಂಪ್ ಪರ ಪ್ರಚಾರಕ್ಕಾಗಿ $898,000 (6 ಕೋಟಿ ರೂ) ದೇಣಿಗೆ ನೀಡಿದ್ದರು. 
SCROLL FOR NEXT