ದೇಶ

ಅರುಣಾಚಲಪ್ರದೇಶ, ಮ್ಯಾನ್ಮಾರ್ ಗಡಿಯಲ್ಲಿ ಭೂಕಂಪನ: 5.4ರಷ್ಟು ತೀವ್ರತೆ ದಾಖಲು

Manjula VN

ಇಟಾನಗರ: ಅರುಣಾಚಲಪ್ರದೇಶ, ಭಾರತ-ಮ್ಯಾನ್ಯಾರ್ ಗಡಿ ಭಾಗ ಸೇರಿದಂತೆ ಈಶಾನ್ಯ ಭಾಗದ ಹಲವೆಡೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ ಎಂದು ಬುಧವಾರ ತಿಳಿದುಬಂದಿದೆ.

ಭಾರತ ಮತ್ತು ಮ್ಯಾನ್ಮಾರ್ ಗಡಿ ಭಾಗದಲ್ಲಿ ತಡರಾತ್ರಿ 12.20 ಸುಮಾರಿಗೆ ಭೂಕಂಪನವಾಗಿರುವುದಾಗಿ ರಾಷ್ಟ್ರೀಯ ಭೂಕಂಪ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.

ಅರುಣಾಚಲಪ್ರದೇಶದ ಕುರುಂಗ್ ಕುಮೇ ಜಿಲ್ಲೆಯಲ್ಲಿ ಬೆಳಗಿನ ಜಾವ 1:02 ಸುಮಾರಿಗ ಭೂಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ. ಇದಲ್ಲದೆ, ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರ, ನಾಗಾಲ್ಯಾಂಡ್, ಮಣಿಪುರದಲ್ಲಿ ಭೂಕಂಪನದ ಅನುಭವವಾಗಿರುವುದಾಗಿ ತಿಳಿದುಬಂದಿದೆ.

ಆಗರ್ತಲಾದಿಂದ 59 ಕಿ.ಮೀ ದೂರದಲ್ಲಿರುವ ಅಂಬಾಸಾ ಎಂಬ ಪ್ರದೇಶದಲ್ಲಿ ಭೂಕಂಪನದ ಕೇಂದ್ರ ಭಾಗ ಕಂಡುಬಂದಿದೆ.

SCROLL FOR NEXT